ಬೆಂಗಳೂರು: ಸಾವನದುರ್ಗದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ವೇಳೆ ವಿದೇಶಿ ಹಣ ಕದ್ದ ಆರೋಪದಲ್ಲಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಯಾಯನ್ನು ಅಮಾನತುಗೊಳಿಸಲಾಗಿದೆ.
ಎನ್.ಜಗದೀಶ್ ಗೌಡ ಅಮಾನತುಗೊಂಡ ಅಧಿಕಾರಿ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಜಗದೀಶ್ ಗೌಡನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಕರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜಗದೀಶ್ ಗೌಡ, 2025ರ ಡಿಸೆಂಬರ್ ೨೪ರಂದು ನಡೆದ ದೇವಾಲಯದ ಹುಂಡಿ ಎಣಿಕೆಯಲ್ಲಿ ವಿದೇಶಿ ಹಣ ಕಳುವು ಮಾಡಿದ ಆರೋಪ ಕೇಳಿಬಂದಿತ್ತು. ಜಗದೀಶ್ ಗೌಡ ವಿರುದ್ಧ ದೂರು ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಅಪರಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಪೊಲೀಸ್ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ತನಿಖೆ ವೇಳೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ರೇವಣಸಿದ್ದೇಶ್ವರ ಬೆಟ್ಟದ ದೇಗುಲದ ಇಒ ಆಗಿದ್ದ ಜಗೀಶ್ ಗೌಡ ಅವರನ್ನು ಅಮಾನತು ಮಾಡಲಾಗಿದೆ.
ಹುಂಡಿ ಎಣಿಕೆ ವೇಳೆ ಸಿಕ್ಕ ವಿದೇಶಿ ಹಣವನ್ನು ಜಗದೀಶ್ ಗೆ ನೀಡಿರುವುದಾಗಿ ದೇಗುಲದ ಸಿಬ್ಬಂದಿ ರಾಕೇಶ್ ತಿಳಿಸಿದ್ದರು. ಆದರೆ ಹುಂಡಿಯಲ್ಲಿ ದೊರೆತ ವಿದೇಶಿ ನೋಟಿನ ಬಗ್ಗೆ ಶಾಸನಬದ್ಧ ಹುಂಡಿಯಲ್ಲಿ ವಹಿಯಲ್ಲಿ ದಾಖಲು ಮಾಡಿಇರಲಿಲ್ಲ. ಹುಂಡಿ ಹಣ ದುರುಪಯೋಗ, ಕರ್ತವ್ಯಲೋಪ, ಬೇಜವಾಬ್ದಾರಿತನ, ನಂಬಿಕೆದ್ರೋಹ ವೆಸಗಿದ ಆರೋಪದಡಿ ಅಮಾನತುಗೊಳಿಸಲಾಗಿದೆ.

