HomeEntertainmentಟಾಕ್ಸಿಕ್ ಯಶಸ್ಸು ಸಹಿಸಲಾಗದೇ ದುರಂಧರ್ ನೋಡುತ್ತಿದ್ದೇನೆ ಎಂದು ಎರಡೆರಡು ಬಾರಿ ಪೋಸ್ಟ್ ಹಂಚಿಕೊಂಡ ತೆಲುಗು ನಿರ್ದೇಶಕ!

ಟಾಕ್ಸಿಕ್ ಯಶಸ್ಸು ಸಹಿಸಲಾಗದೇ ದುರಂಧರ್ ನೋಡುತ್ತಿದ್ದೇನೆ ಎಂದು ಎರಡೆರಡು ಬಾರಿ ಪೋಸ್ಟ್ ಹಂಚಿಕೊಂಡ ತೆಲುಗು ನಿರ್ದೇಶಕ!

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಕಂಡಿದ್ದು, ಬಿಡುಗಡೆಯ ಮೊದಲ ದಿನವೇ ಭರ್ಜರಿ ಗಳಿಕೆ ಕಂಡಿದೆ. ಚಿತ್ರತಂಡದ ಅಧಿಕೃತವಾಗಿ ಘೋಷಿಸಿದ್ದು, ಮೊದಲ ದಿನದ ವಿಶ್ವಾದ್ಯಂತ 150 ಕೋಟಿಗೂ ಅಧಿಕ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದೆ.

‘ಕೆಜಿಎಫ್’ ಬಳಿಕ ಯಶ್ ನಟನೆಯ ಚಿತ್ರವಾಗಿರುವ ಕಾರಣ ‘ಟಾಕ್ಸಿಕ್’ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇತ್ತು. ಚಿತ್ರ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಗಳು ಹರಿದಾಡುತ್ತಿದ್ದು, ಯಶ್ ಅವರ ಅಭಿನಯ, ಪರದೆಯ ಮೇಲಿನ ಅವರ ಖದರ್, ಸಾಹಸ ದೃಶ್ಯಗಳು ಹಾಗೂ ಚಿತ್ರದ ದೃಶ್ಯ ವೈಭವಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಚಿತ್ರ ಬಿಡುಗಡೆಯಾದ ಮೊದಲ ದಿನವೇ ತೆಲುಗು ಸಿನಿಮಾ ಪೇಜ್‌ಗಳಿಂದ ಟಾಕ್ಸಿಕ್ ಕುರಿತು ದೊಡ್ಡ ಮಟ್ಟದಲ್ಲಿ ನೆಗೆಟಿವ್ ರಿವ್ಯೂಗಳು ಹರಿದಾಡಿದವು. ಅದರಲ್ಲೂ ಇನ್ನೂ ಭಾರತದಲ್ಲಿ ಮೊದಲ ಪ್ರದರ್ಶನ ಮುಗಿದೇ ಇರಲಿಲ್ಲ, ಆಗಲೇ ತೆಲುಗು ಪೇಜ್‌ಗಳು ಬೆಟ್ಟದಷ್ಟು ಕೆಟ್ಟ ವಿಮರ್ಶೆಯನ್ನು ಪ್ರಕಟಿಸಿದ್ದು ಷಡ್ಯಂತ್ರದ ಅನುಮಾನಗಳನ್ನು ಹುಟ್ಟುಹಾಕಿದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಇದೇ ಸಮಯಕ್ಕೆ ತೆಲುಗು ಸೆಲೆಬ್ರಿಟಿಗಳು ಒಂದು ವಾರದ ಹಿಂದೆ ಬಿಡುಗಡೆಯಾಗಿದ್ದ ತೆಲುಗಿನ ಇರುಮುಡಿ ಚಿತ್ರದ ಕುರಿತು ಪೋಸ್ಟ್ ಹಂಚಿಕೊಂಡಿದ್ದನ್ನು ಕಂಡು ಯಶ್ ಅಭಿಮಾನಿಗಳು ಹಾಗೂ ಕನ್ನಡಿಗರು ಇದು ಯಶ್ ವಿರುದ್ಧ ತೆಲುಗು ಚಿತ್ರರಂಗದ ಹಗೆತನ ಎಂದರು.

ಇವುಗಳ ಜತೆಗೆ ಕಾಂಟ್ರವರ್ಸಿಯಿಂದಲೇ ಹೆಚ್ಚು ಸದ್ದು ಮಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟಾಕ್ಸಿಕ್ ಬಿಡುಗಡೆ ದಿನವೇ ತಮ್ಮ ಎಕ್ಸ್ ಖಾತೆಯಲ್ಲಿ ಮತ್ತೆ ದುರಂಧರ್ ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಇದನ್ನು ಕಂಡ ಕನ್ನಡಿಗರು ಇದೂ ಸಹ ಯಶ್ ಹಾಗೂ ಟಾಕ್ಸಿಕ್ ವಿರುದ್ಧದ ಪೋಸ್ಟ್ ಎಂದಿದ್ದರು. ಏಕೆಂದರೆ ಟಾಕ್ಸಿಕ್ ಹಾಗೂ ದುರಂಧರ್ ಒಂದೇ ದಿನ ಬಿಡುಗಡೆಯಾಗಬೇಕಿದ್ದ ಸಿನಿಮಾಗಳು. ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಟಾಕ್ಸಿಕ್ ಮುಂದೂಡಲ್ಪಟ್ಟಿತ್ತು. ಆ ಸಮಯದಿಂದಲೂ ಟಾಕ್ಸಿಕ್ ದುರಂಧರ್‌ಗೆ ಹೆದರಿಕೊಂಡು ರೇಸ್‌ನಿಂದ ಹಿಂದೆ ಸರಿಯಿತು ಎಂಬ ಟ್ರೋಲ್‌ಗಳನ್ನು ಅನೇಕರು ಮಾಡುತ್ತಾ ಬಂದಿದ್ದರು. ಹೀಗಾಗಿಯೇ ರಾಮ್‌ಗೋಪಾಲ್ ವರ್ಮಾ ಟಾಕ್ಸಿಕ್‌ಗೆ ನೆಗೆಟಿವ್ ರಿವ್ಯೂ ಬಂದ ಕೂಡಲೇ ದುರಂಧರ್ ನೋಡುತ್ತಿದ್ದೇನೆ ಎಂದು ಬರೆದುಕೊಂಡು ಕಿಚಾಯಿಸಿದ್ದಾರೆ ಎಂದು ಹಲವರು ಆರೋಪಿಸಿದ್ದರು.

ಇನ್ನು ಟಾಕ್ಸಿಕ್ ಬಿಡುಗಡೆ ದಿನ ಮಾತ್ರವಲ್ಲದೇ ನಿನ್ನೆ ( ಆಗಸ್ಟ್ 27 ) ಮತ್ತೊಮ್ಮೆ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ದುರಂಧರ್ ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದು, ಇದೂ ಸಹ ಅಂತಹದ್ದೇ ಚರ್ಚೆಯನ್ನು ಹುಟ್ಟುಹಾಕಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular