HomeIndiaಕಾರಿನ ಕಿಟಕಿಯಿಂದ ಹೊರಗಿಣಿಕಿದ ಬಾಲಕಿ; ಅರಿಯದೇ ಗ್ಲಾಸ್‌ ಏರಿಸಿದ ಚಾಲಕ; ಪುಟ್ಟ ಕಂದನ ದಾರುಣ ಸಾವು

ಕಾರಿನ ಕಿಟಕಿಯಿಂದ ಹೊರಗಿಣಿಕಿದ ಬಾಲಕಿ; ಅರಿಯದೇ ಗ್ಲಾಸ್‌ ಏರಿಸಿದ ಚಾಲಕ; ಪುಟ್ಟ ಕಂದನ ದಾರುಣ ಸಾವು

ಹೈದರಾಬಾದ್: ಕಾರಿನ ಕಿಟಕಿಯ ಹೊರಗೆ ತಲೆ ಹಾಕಿ ಹಾಡು ಹೇಳುತ್ತಿದ್ದ ಬಾಲಕಿ ಭಯಾನಕ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸೂರ್ಯ ಪೇಟ್ ಜಿಲ್ಲೆಯಲ್ಲಿ ವರದಿಯಾಗಿದೆ.

ಒಂಬತ್ತು ವರ್ಷದ ಬಾಲಕಿಯನ್ನು ಬನೋತ್ ಇಂದ್ರಜಾ ‌ಎಂದು ಗುರುತಿಸಲಾಗಿದೆ. ಕಿಟಕಿಯ ಹೊರಗೆ ಕತ್ತು ಹಾಕಿದ್ದ ಬಾಲಕಿಯನ್ನು ಗಮನಿಸದ ಚಾಲಕ ಕಿಟಕಿಯನ್ನು ಕ್ಲೋಸ್‌ ಮಾಡಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮದುವೆ ಮುಗಿಸಿ ಕುಟುಂಬ ವಾಪಸಾಗುತ್ತಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಕುಳಿದಿದ್ದ ಬಾಲಕಿ ಹೊರಕ್ಕೆ ತಲೆ ಹಾಕಿದ್ದಳು. ಕಿಟಕಿಯನ್ನು ಕ್ಲೋಸ್‌ ಮಾಡುವ ಪವರ್ ವಿಂಡೋ ಸ್ವಿಚ್ ಅನ್ನು ಚಾಲಕ ಒತ್ತಿದ್ದಾನೆ. ಇದರಿಂದ ಬಾಲಕಿಯ ಕುತ್ತಿಗೆ, ಕಿಟಕಿಗೆ ಸಿಲುಕೊಂಡಿದ್ದು, ಉಸಿರುಕಟ್ಟಿ ಮೃತಪಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular