HomeIndiaBIG NEWS: ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜಿಸಿ ಕಿರುಕುಳ: ಆತ್ಮಹತ್ಯೆಗೆ ಶರಣಾದ ನೊಂದ...

BIG NEWS: ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜಿಸಿ ಕಿರುಕುಳ: ಆತ್ಮಹತ್ಯೆಗೆ ಶರಣಾದ ನೊಂದ ಬಾಲಕ

ಸ್ನೇಹಿತರು ಬಾಲಕನೊಬ್ಬನನ್ನು ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು ಆತನ ಬಟ್ಟೆ ಬಿಚ್ಚಿಸಿ, ಕಿರುಕುಳ ನೀಡಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದು, ನೊಂದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಎಂಬಲ್ಲಿ ನಡೆದಿದೆ.

ಆದಿತ್ಯ ಆತ್ಮಹತ್ಯೆಗೆ ಶರಣಾಗಿರುವ ಬಾಲಕ. ಘಟನೆಯಿಂದ ನೊಂದು, ಅವಮಾನ ತಾಳಲಾರದೇ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಿಎಸ್ ಕಪ್ತಗಂಜ್ ನಲ್ಲಿ ಪ್ರಕರಣ ದಾಖಲಾಗಿದೆ.

ಸಾವಿಗೂ ಮುನ್ನ ಬಾಲಕ ಸ್ನೇಹಿತರಿಂದ ತೀವ್ರ ಕಿರುಕುಳಕ್ಕೆ, ಹಿಂಸೆಗೆ ಒಳಗಾಗಿದ್ದಾನೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಬದವರು ಆರೋಪಿಸಿದ್ದಾರೆ. ಡಿ.20ರಂದು ಈ ಘಟನೆ ನಡೆದಿದೆ. ಅಂದು ತಡರತರಿ ಮನೆಗೆ ಬಂದ ಆದಿತ್ಯ, ಮಾರನೆ ದಿನ ನಮಗೆ ವಿಷಯ ತಿಳಿಸಿದ್ದಾನೆ. ನಾವು ಪೊಲೀಸ್ ಕಂಪ್ಲೇಂಟ್ ಕೊಟ್ಟರೂ ಪೊಲೀಸರು ದೂರು ದಾಖಲಿಸಿಲ್ಲ. ಆತ ಮತ್ತೆ ಕಿರುಕುಳಕ್ಕೊಳಗಾಗಿದ್ದಾನೆ. ಇದರಿಂದ ನೊಂದು ಬಾಲಕ ಆತ್ಮಹತ್ಯೆ ನಿರ್ಧಾರ ಮಡಿರಬಹುದು ಎಂದು ಮೃತ ಬಾಲಕನ ಚಿಕ್ಕಪ್ಪ ವಿಜಯ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular