HomeLatest NewsBIG NEWS : ತಾಂತ್ರಿಕ ದೋಷ : ಟಿಕೆಟ್ ತೆಗೆದುಕೊಳ್ಳಲು 'ನಮ್ಮ ಮೆಟ್ರೋ' ಪ್ರಯಾಣಿಕರ ಪರದಾಟ.!

BIG NEWS : ತಾಂತ್ರಿಕ ದೋಷ : ಟಿಕೆಟ್ ತೆಗೆದುಕೊಳ್ಳಲು ‘ನಮ್ಮ ಮೆಟ್ರೋ’ ಪ್ರಯಾಣಿಕರ ಪರದಾಟ.!

ಬೆಂಗಳೂರು : ಒಂದೆಡೆ ದರ ಏರಿಕೆಯ ಬಿಸಿ, ಇನ್ನೊಂದೆಡೆ ತಾಂತ್ರಿಕ ದೋಷದ ಕಿರಿಕಿರಿ! ಮಂಗಳವಾರ ಸಂಜೆ ಕಚೇರಿ ಮುಗಿಸಿ ಮನೆಗೆ ಹೊರಟ ಸಾವಿರಾರು ಬೆಂಗಳೂರಿಗರು ಮೆಟ್ರೋ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ನಿಲ್ಲುವಂತಾಯಿತು.

ಹೌದು. ಯುಪಿಐ ಸ್ಕ್ಯಾನ್ ಮಾಡಿದರೂ ಟಿಕೆಟ್ ಬರದೇ ಇದ್ದಾಗ ಪ್ರಯಾಣಿಕರು ಮತ್ತುBMRCL ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. “ಹಣ ಅಕೌಂಟ್ನಿಂದ ಹೋಯಿತು, ಆದ್ರೆ ಗೇಟ್ ಓಪನ್ ಆಗುತ್ತಿಲ್ಲ!” ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.

ಫೆಬ್ರವರಿ 10ರ ಸಂಜೆ 6 ಗಂಟೆಯಿಂದ ಬ್ಯಾಂಕ್ ಸರ್ವರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮೆಟ್ರೋ ಟಿಕೆಟ್ ಪಡೆಯಲು ತೊಂದರೆಯಾಯಿತು . ಯುಪಿಐ (UPI) ಮತ್ತು ಕಾರ್ಡ್ ಪಾವತಿಗಳು ವಿಫಲಗೊಂಡವು. ಹಣ ಕಟ್ ಆದರೂ ಕ್ಯೂಆರ್ ಕೋಡ್ ಬಾರದೆ ಪ್ರಯಾಣಿಕರು ಪರದಾಡಿದರು: ಯಶವಂತಪುರ, ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಜನಜಂಗುಳಿ ಮತ್ತು ಆಕ್ರೋಶ ವ್ಯಕ್ತವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕರಿಗೆ ಸಲಹೆಗಳು
ನಮ್ಮ ಮೆಟ್ರೋ ಸರ್ವರ್ ಡೌನ್: ನೀವು ನೆನಪಿಡಬೇಕಾದ ಮುನ್ನೆಚ್ಚರಿಕೆಗಳು ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಮೆಟ್ರೋ ಡಿಜಿಟಲ್ ಪಾವತಿಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಈ ಕೆಳಗಿನ ಅಂಶಗಳನ್ನು ಗಮನಿಸಿ:

  1. ಪದೇ ಪದೇ ಪಾವತಿಸಬೇಡಿ: ಒಮ್ಮೆ ಹಣ ಕಟ್ ಆಗಿ ಟಿಕೆಟ್ ಬರದಿದ್ದರೆ, ಪದೇ ಪದೇ ಯುಪಿಐ ಪಾವತಿಗೆ ಪ್ರಯತ್ನಿಸಬೇಡಿ.
  2. ಹಣ ವಾಪಸ್ ಬರುತ್ತದೆ: ಸಾಮಾನ್ಯವಾಗಿ ಕಟ್ ಆದ ಹಣ 24 ರಿಂದ 48 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಮರುಪಾವತಿಯಾಗುತ್ತದೆ.
  3. ನಗದು ಇಟ್ಟುಕೊಳ್ಳಿ: ಯುಪಿಐ ನಂಬುವ ಬದಲು ತುರ್ತು ಸಂದರ್ಭಕ್ಕಾಗಿ ಸಣ್ಣ ಮೊತ್ತದ ನಗದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
  4. ಸ್ಮಾರ್ಟ್ ಕಾರ್ಡ್ ಬಳಸಿ: ಯುಪಿಐಗಿಂತ ಮೆಟ್ರೋ ಸ್ಮಾರ್ಟ್ ಕಾರ್ಡ್ಗಳು ಇಂತಹ ಸಮಯದಲ್ಲಿ ಹೆಚ್ಚು ಭರವಸೆ ನೀಡುತ್ತವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular