HomeLatest NewsT20 World Cup 2026: ಇಂಥ ಬೌಲಿಂಗ್ ಗಲ್ಲಿ ಕ್ರಿಕೆಟ್‌ನಲ್ಲಿ ಮಾಡಿದ್ರೂ ಮನೆಗೆ ಕಳುಹಿಸುತ್ತಾರೆ; ಪಾಕ್...

T20 World Cup 2026: ಇಂಥ ಬೌಲಿಂಗ್ ಗಲ್ಲಿ ಕ್ರಿಕೆಟ್‌ನಲ್ಲಿ ಮಾಡಿದ್ರೂ ಮನೆಗೆ ಕಳುಹಿಸುತ್ತಾರೆ; ಪಾಕ್ ಮೋಸದ ಬೌಲಿಂಗ್ ಲೈವ್‌ನಲ್ಲಿ ಸೆರೆ

ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳಲ್ಲಿ ಪಾಕಿಸ್ತಾನ ಶುಭಾರಂಭ ಮಾಡಿದೆ. ಮೊದಲಿಗೆ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿ ಕೊನೆಯ ಹಂತದಲ್ಲಿ ಫಹೀಮ್ ಅಶ್ರಫ್ ಬ್ಯಾಟಿಂಗ್ ನೆರವಿನಿಂದ ಗೆಲುವು ಕಂಡ ಪಾಕಿಸ್ತಾನ ನಿನ್ನೆ ( ಫೆಬ್ರವರಿ 10 ) ನಡೆದ ತನ್ನ ಎರಡನೇ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಗೆದ್ದು ಸತತ ಎರಡನೇ ಗೆಲುವು ಕಂಡಿದೆ.

ಹೀಗೆ ಎರಡು ಪಂದ್ಯಗಳನ್ನಾಡಿ ಎರಡರಲ್ಲೂ ಗೆದ್ದು ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಪಾಕಿಸ್ತಾನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೋಸದ ಬೌಲಿಂಗ್ ಆರೋಪಕ್ಕೆ ಒಳಗಾಗಿದೆ. ಹೌದು, ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಖ್ ಬೌಲಿಂಗ್ ಶೈಲಿ ಈ ಸಂಶಯವನ್ನು ಹುಟ್ಟುಹಾಕಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧದ ಪಂದ್ಯ ನಡೆಯುತ್ತಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಈತನ ಬೌಲಿಂಗ್ ಶೈಲಿಯ ಬಗ್ಗೆ ಹಲವು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಪೋಸ್ಟ್ ಮಾಡಿ ಇದು ಯಾವ ರೀತಿಯ ಬೌಲಿಂಗ್? ಇಂತಹ ಬೌಲಿಂಗ್‌ ಏನಾದರೂ ಗಲ್ಲಿ ಕ್ರಿಕೆಟ್‌ನಲ್ಲಿ ಮಾಡಿದ್ದರೂ ಸಹ ಇದು ನಿಯಮವನ್ನು ಪಾಲಿಸುತ್ತಿಲ್ಲ ಎಂದು ಹೇಳಿ ಮನೆಗೆ ಕಳುಹಿಸುತ್ತಾರೆ ಎಂದು ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಸ್ಮಾನ್ ತಾರಿಖ್ ಬೌಲಿಂಗ್ ಮಾಡಲು ಕ್ರೀಸ್ ಬಳಿ ಬರುತ್ತಿದ್ದಂತೆ ಎರಡು ಸೆಕೆಂಡುಗಳ ಕಾಲ ಚೆಂಡನ್ನು ಹಿಡಿದಿಟ್ಟು ಬಳಿಕ ಬಿಡುಗಡೆ ಮಾಡುವುದು ಈ ಆರೋಪಕ್ಕೆ ಕಾರಣವಾಗಿದ್ದು, ನೆಟ್ಟಿಗರು ಕೂಡಲೇ ಐಸಿಸಿ ಈ ಬೌಲಿಂಗ್ ಶೈಲಿಯ ಬಗ್ಗೆ ಪರಿಶೀಲಿಸಿ ಇಂತಹ ಆಟಗಾರರನ್ನು ಬ್ಯಾನ್ ಮಾಡಬೇಕು, ಇದರಿಂದ ಬೇರೆ ತಂಡಗಳಿಗೆ ಹಿನ್ನಡೆ ಹಾಗೂ ಮೋಸವಾಗುತ್ತಿದೆ ಎಂದು ಸಹ ಆಗ್ರಹಿಸಿದ್ದಾರೆ.

ಇನ್ನು ಪಾಕಿಸ್ತಾನ ಹಾಗೂ ಯುಎಸ್‌ಎ ವಿರುದ್ಧದ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬಂದಿದ್ದ ಕ್ರಿಕೆಟ್ ಅಭಿಮಾನಿಗಳು ಸಹ ಉಸ್ಮಾನ್ ತಾರಿಖ್ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿ ಇದು ಮೋಸ ಎಂದು ಟೀಕಿಸಿದ್ದಾರೆ.

ಅಂದಹಾಗೆ ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಉಸ್ಮಾನ್ ತಾರಿಖ್ 27 ರನ್ ನೀಡಿ 3 ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular