HomeEntertainmentಡಿಸೆಂಬರ್ 13 ರಂದು 'ಜಸ್ಟ್ ಪಾಸ್' ಚಿತ್ರದ ಟೀಸರ್ ‌‌ ರಿಲೀಸ್

ಡಿಸೆಂಬರ್ 13 ರಂದು ‘ಜಸ್ಟ್ ಪಾಸ್’ ಚಿತ್ರದ ಟೀಸರ್ ‌‌ ರಿಲೀಸ್

ಕೆಎಂ ರಘು ರಚಿಸಿ ನಿರ್ದೇಶಿಸಿರುವ ‘ಜಸ್ಟ್ ಪಾಸ್’ ಚಿತ್ರದ ಟೀಸರ್ ಡಿಸೆಂಬರ್ 13 ರಂದು ರಿಲೀಸ್ ಆಗಲಿದ್ದು ಚಿತ್ರ ತಂಡ ಬಿಡುಗಡೆ ಕಾರ್ಯಕ್ರಮವನ್ನು  ಬೆಂಗಳೂರಿನ gt world ಮಾಲ್ ನಲ್ಲಿ ಹಮ್ಮಿಕೊಂಡಿದೆ. ಈ ಚಿತ್ರದಲ್ಲಿ ಶ್ರೀ ಸೇರಿದಂತೆ ಪ್ರಣತಿ, ಅರ್ಪಿತ, ಡುಮ್ಮ ವಿಶ್ವಾಸ್, ನಿಖಿಲ್, ಗಗನ್, ಚಂದು ಶ್ರೀ, ಯಶಿಕಾ, ಅಭಿ ಸೇರಿದಂತೆ ರಂಗಾಯಣ ರಘು ಹಾಗೂ ಸಾಧು ಕೋಕಿಲ ಬಣ್ಣ ಹಚ್ಚಿದ್ದಾರೆ.

ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಶ್ರೀಧರ್ ಕೆವಿ ಹಾಗೂ ಶಶಿಧರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಹರ್ಷವರ್ಧನ್ ಸಂಗೀತ ‌‌ ಯೋಜನೆ ನೀಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನವಿದ್ದು, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular