ಬೆಂಗಳೂರು: ಎಲೆಕ್ಟ್ರಿಕ್ ವಾಹನ ಲೋಕದ ಕಿಂಗ್ ಟಾಟಾ ಮೋಟಾರ್ಸ್ ಇಂದು ತನ್ನ ಮೋಸ್ಟ್ ಪಾಪ್ಯುಲರ್ ಕಾರ್ ಟಾಟಾ ಪಂಚ್ ಇವಿಯ ಹೊಸ ಅವತಾರವನ್ನು ಮಾರುಕಟ್ಟೆಗೆ ಇಳಿಸಿದೆ. ಆಕರ್ಷಕ ಲುಕ್ ಪವರ್ಫುಲ್ ಬ್ಯಾಟರಿ ಮತ್ತು ಅಚ್ಚರಿಯ ಬೆಲೆಯೊಂದಿಗೆ ಬಂದಿರೋ ಈ ಎಸ್ಯುವಿ ಈಗ ಇವಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವುದು ಗ್ಯಾರಂಟಿ.ಹಾಗಿದ್ರೆ ಹೊಸ ಪಂಚ್ ಇವಿಯಲ್ಲಿ ಏನೆಲ್ಲಾ ಬದಲಾವಣೆಗಳಿವೆ? ಆ ಕಮ್ಮಿ ಬೆಲೆಯ ಮ್ಯಾಜಿಕ್ ಏನು? ಇಲ್ಲಿದೆ ಫುಲ್ ಡಿಟೇಲ್ಸ್
ಬೆಲೆ ಎಷ್ಟು? BaaS ಪ್ಲಾನ್ ಅಂದ್ರೆ ಏನು?
ಹೊಸ ಟಾಟಾ ಪಂಚ್ ಇವಿ ಫೇಸ್ಲಿಫ್ಟ್ನ ಆರಂಭಿಕ ಬೆಲೆ ₹9.69 ಲಕ್ಷ (ಎಕ್ಸ್-ಶೋರೂಂ). ಆದರೆ, ಟಾಟಾ ಈ ಬಾರಿ ಒಂದು ಮಾಸ್ಟರ್ ಪ್ಲಾನ್ ಮಾಡಿದೆ!
BaaS (Battery-as-a-Service) ಯೋಜನೆ: ಈ ಸ್ಕೀಮ್ ಅಡಿಯಲ್ಲಿ ನೀವು ಕೇವಲ ₹6.49 ಲಕ್ಷಕ್ಕೆ ಕಾರನ್ನು ಮನೆಗೆ ಕೊಂಡೊಯ್ಯಬಹುದು.
ಇಲ್ಲಿ ಬ್ಯಾಟರಿ ಬೆಲೆಯನ್ನು ಕಾರಿನ ದರದಿಂದ ಕಡಿತಗೊಳಿಸಲಾಗಿರುತ್ತದೆ. ಬದಲಿಗೆ ನೀವು ಬ್ಯಾಟರಿ ಬಾಡಿಗೆಯಾಗಿ ಪ್ರತಿ ಕಿಲೋಮೀಟರ್ಗೆ ₹2.6 ರಂತೆ ಇಎಂಐ ಪಾವತಿಸಬೇಕಾಗುತ್ತದೆ. ಇದರಿಂದ ಆರಂಭಿಕ ಬಜೆಟ್ ಕಮ್ಮಿ ಇರೋರಿಗೂ ಇವಿ ಕಾರು ಕನಸಲ್ಲ, ನನಸು
ಬ್ಯಾಟರಿ ಪವರ್ ಮತ್ತು ರೇಂಜ್: ಲಾಂಗ್ ಡ್ರೈವ್ಗೆ ಇದು ಬೆಸ್ಟ್
ಟಾಟಾ ಮೋಟಾರ್ಸ್ ಎಂಡಿ ಶೈಲೇಶ್ ಚಂದ್ರ ಅವರು ಹೇಳುವಂತೆ, ಹೊಸ ಪಂಚ್ ಇವಿ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ:
ಮಧ್ಯಮ ಶ್ರೇಣಿ (30kWh): ಸಿಟಿ ಡ್ರೈವಿಂಗ್ಗೆ ಸೂಕ್ತ.
ದೀರ್ಘ ಶ್ರೇಣಿ (40kWh): ಈ ವಿಭಾಗದಲ್ಲೇ ಅತಿ ದೊಡ್ಡ ಬ್ಯಾಟರಿ ಇದಾಗಿದ್ದು, ಪೂರ್ಣ ಚಾರ್ಜ್ನಲ್ಲಿ 468 ಕಿ.ಮೀ ರೇಂಜ್ (ARAI) ನೀಡುತ್ತದೆ. ಅಂದರೆ ರಿಯಲ್ ವರ್ಲ್ಡ್ನಲ್ಲಿ ಆರಾಮವಾಗಿ 335 ರಿಂದ 355 ಕಿ.ಮೀ ಓಡಿಸಬಹುದು.
ಚಾರ್ಜಿಂಗ್ ಟೆನ್ಷನ್ ಇಲ್ಲ: 26 ನಿಮಿಷದಲ್ಲಿ 80% ಚಾರ್ಜ್
ಫಾಸ್ಟ್ ಚಾರ್ಜಿಂಗ್: ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಕೇವಲ 26 ನಿಮಿಷದಲ್ಲಿ 0 ರಿಂದ 80% ಬ್ಯಾಟರಿ ತುಂಬಿಸಬಹುದು.
ಕ್ವಿಕ್ ಚಾರ್ಜ್: ಬರಿ 15 ನಿಮಿಷ ಚಾರ್ಜ್ ಮಾಡಿದ್ರೆ ಸಾಕು, ಬರೋಬ್ಬರಿ 135 ಕಿ.ಮೀ ಮೈಲೇಜ್ ಸಿಗುತ್ತೆ
ಮನೆಗಾಗಿ 3.3kW ಮತ್ತು 7.2kW ವಾಲ್ಬಾಕ್ಸ್ ಚಾರ್ಜರ್ ಆಯ್ಕೆಗಳೂ ಇವೆ.
ಲುಕ್ ಮತ್ತು ಫೀಚರ್ಸ್: ಮಿನಿ ಎಸ್ಯುವಿ ಈಗ ಮತ್ತಷ್ಟು ಸ್ಮಾರ್ಟ್
ಡಿಸೈನ್: ಹೊಸ ಮುಂಭಾಗದ ಬಂಪರ್, ಮುಚ್ಚಿದ ಗ್ರಿಲ್ 16-ಇಂಚಿನ ಏರೋ-ಆಪ್ಟಿಮೈಸ್ಡ್ ಅಲಾಯ್ ವೀಲ್ಸ್ ಮತ್ತು ಕನೆಕ್ಟೆಡ್ ಎಲ್ಇಡಿ ಟೈಲ್ಲ್ಯಾಂಪ್ಗಳು ಕಾರಿಗೆ ಪ್ರೀಮಿಯಂ ಲುಕ್ ನೀಡಿವೆ.
ಇಂಟೀರಿಯರ್: 10.25-ಇಂಚಿನ ದೊಡ್ಡ ಟಚ್ಸ್ಕ್ರೀನ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್ಲೆಸ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಸೀಟುಗಳಿವೆ.
ಸುರಕ್ಷತೆ: 6 ಏರ್ಬ್ಯಾಗ್ಗಳು ಸ್ಟ್ಯಾಂಡರ್ಡ್ ಆಗಿ ಬರಲಿವೆ. ಜೊತೆಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಫೀಚರ್ಸ್ಗಳಿವೆ.
ಆಫ್ ರೋಡಿಂಗ್: 195 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರೋದ್ರಿಂದ ಹಳ್ಳಿ ರಸ್ತೆಗಳಲ್ಲೂ ಪಂಚ್ ಅಬ್ಬರಿಸುತ್ತೆ
ಬಿಗ್ ಆಫರ್: ಬ್ಯಾಟರಿ ಮೇಲೆ ಜೀವಮಾನದ ಖಾತರಿ
ಇವಿ ಖರೀದಿಸುವವರಿಗೆ ದೊಡ್ಡ ತಲೆನೋವೇ ಬ್ಯಾಟರಿ ಲೈಫ್. ಆದರೆ ಟಾಟಾ ಈಗ ಜೀವಮಾನದ ಖಾತರಿ (Lifetime Warranty) ನೀಡುತ್ತಿದೆ ಬ್ಯಾಟರಿಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡರೆ ಕಂಪನಿಯೇ ಉಚಿತವಾಗಿ ಸರಿಪಡಿಸಿ ಕೊಡಲಿದೆ. ಇಂತಹ ಆಫರ್ ಈ ವಿಭಾಗದಲ್ಲೇ ಮೊದಲು,ಪೆಟ್ರೋಲ್ ಬೆಲೆ ಏರಿಕೆಯಿಂದ ಬೇಸತ್ತವರಿಗೆ ಮತ್ತು ಬಜೆಟ್ನಲ್ಲಿ ಎಸ್ಯುವಿ ಬೇಕು ಅನ್ನೋರಿಗೆ ಈ ಹೊಸ ಪಂಚ್ ಇವಿ ಪರ್ಫೆಕ್ಟ್ ಚಾಯ್ಸ್. ಅದರಲ್ಲೂ BaaS ಪ್ಲಾನ್ ಮಧ್ಯಮ ವರ್ಗದವರಿಗೆ ವರವಾಗಲಿದೆ.

