HomeIndiaಮಣಿಪುರ NDA ಸರ್ಕಾರ ರಚನೆ: ವೀಕ್ಷಕರನ್ನು ನೇಮಿಸಿದ ಬಿಜೆಪಿ

ಮಣಿಪುರ NDA ಸರ್ಕಾರ ರಚನೆ: ವೀಕ್ಷಕರನ್ನು ನೇಮಿಸಿದ ಬಿಜೆಪಿ

ಮಣಿಪುರದಲ್ಲಿ NDA ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದು, ಅವರು ಫೆಬ್ರವರಿ 13ಕ್ಕೆ ಅಂತ್ಯಗೊಳ್ಳಲಿದೆ. ಎನ್‌ಡಿಎ ಶಾಸಕರು ದೆಹಲಿಗೆ ಬಂದು ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಸಭೆಯನ್ನು ನಡೆಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಮಣಿಪುರ ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಕೇಂದ್ರದ ವೀಕ್ಷಕರನ್ನು ನೇಮಕ ಮಾಡಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಕೇಂದ್ರದ ವೀಕ್ಷಕರಾಗಿದ್ದಾರೆ.

ಭಾನುವಾರ ರಾತ್ತಿ ಹಲವು ಶಾಸಕರು, ಸೋಮವಾರ ಕೆಲವು ಎನ್‌ಡಿಎ ಮೈತ್ತಿಕೂಟದ ಶಾಸಕರು ದೆಹಲಿಗೆ ಆಗಮಿಸಿದ್ದರು. ಸೋಮವಾರ ರಾತ್ರಿ ಶಾಸಕರ ಜೊತೆ ಸಭೆಯನ್ನು ನಡೆಸಿದ ಬಳಿಕ ಬಿಜೆಪಿ ವೀಕ್ಷಕರನ್ನು ನೇಮಕ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತರುಣ್ ಚುಗ್ ನೇತೃತ್ವದಲ್ಲಿ ನಡೆಯುವ ಎನ್‌ಡಿಎ ಮೈತ್ರಿಕೂಟದ ಶಾಸಕರ ಸಭೆಯಲ್ಲಿ ಮಣಿಪುರ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಫೆಬ್ರವರಿ 13ರ ಬಳಿಕ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ.

ರಾಷ್ಟ್ರಪತಿ ಆಳ್ವಿಕೆ: ಮಣಿಪುರದಲ್ಲಿ ಗಲಭೆಗಳ ಬಳಿಕ ಫೆಬ್ರವರಿ 13, 2025ರಂದು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು. 6 ತಿಂಗಳ ಬಳಿಕ ಇದನ್ನು ಮತ್ತೆ 6 ತಿಂಗಳು ವಿಸ್ತರಣೆ ಮಾಡಲಾಗಿತ್ತು. ಈಗ ಫೆಬ್ರವರಿ 13ಕ್ಕೆ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳ್ಳಲಿದ್ದು, ಸರ್ಕಾರ ರಚನೆ ಚಟುವಟಿಕೆ ಬಿರುಸಾಗಿದೆ.

ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವಾಗ ವಿಧಾನಸಭೆಯನ್ನು ವಿಸರ್ಜನೆ ಮಾಡಿರಲಿಲ್ಲ. ಈಗ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಣಿಪುರದಲ್ಲಿ ಸರ್ಕಾರ ರಚನೆ ಮಾಡಲು ಒಪ್ಪಿಗೆ ಪಡೆದ ಬಳಿಕ ಈ ಕುರಿತ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ.

ಮಣಿಪುರ ವಿಧಾನಸಭೆ ಸದಸ್ಯ ಬಲ 60. ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವಾಗ ಎನ್.ಬಿರೇನ್ ಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ, ಎನ್‌ಪಿಎಫ್, ಎನ್‌ಪಿಪಿ ಮತ್ತು ಪಕ್ಷೇತರ ಶಾಸಕರು ಸೇರಿ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆ ಮಾಡಿದ್ದರು. ಈ ಸರ್ಕಾರದ ಅವಧಿ 2027ರ ತನಕ ಇದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಬಿಜೆಪಿ ಈಶಾನ್ಯ ರಾಜ್ಯಗಳ ಉಸ್ತುವಾರಿ ಸಂಬಿತ್ ಪಾತ್ರಾ ಶಾಸಕರ ಜೊತೆ ಡಿಸೆಂಬರ್‌ನಲ್ಲಿ ಸಭೆ ನಡೆಸಿದ್ದರು. ಭಾನುವಾರ ದೆಹಲಿಗೆ ಆಗಮಿಸಿದ್ದ ಶಾಸಕರ ಜೊತೆ ತರುಣ್ ಚುಗ್ ಸಭೆಯನ್ನು ಮಾಡಿದ್ದರು.

ಮಣಿಪುರ ರಾಜ್ಯದಲ್ಲಿ ಬಿಜೆಪಿಯ 37 ಶಾಸಕರು ಇದ್ದಾರೆ. 2022ರಲ್ಲಿ 32 ಬಿಜೆಪಿ ಶಾಸಕರು ಗೆಲುವು ಸಾಧಿಸಿದ್ದರು. 6 ಸೀಟುಗಳಲ್ಲಿ ಜೆಡಿಯು ಶಾಸಕರು ಗೆದ್ದಿದ್ದರು. ಇವರಲ್ಲಿ 5 ಜನರು ಚುನಾವಣೆ ಬಳಿಕ ಬಿಜೆಪಿ ಸೇರಿದ್ದಾರೆ. ಆದ್ದರಿಂದ ಬಿಜೆಪಿ ಶಾಸಕರ ಬಲ 37.

6 ಎನ್‌ಪಿಪಿ, 5 ಎನ್‌ಪಿಎಫ್, 5 ಕಾಂಗ್ರೆಸ್, ಕೆಪಿಎ 2, ಜೆಡಿಯು 1, 3 ಪಕ್ಷೇತರ ಶಾಸಕರು ರಾಜ್ಯದಲ್ಲಿದ್ದಾರೆ. ಶಾಸಕರ ನಿಧನದ ಕಾರಣ ಒಂದು ಸೀಟು ಖಾಲಿ ಇದ್ದು, ಉಪ ಚುನಾವಣೆ ನಡೆಯಬೇಕಿದೆ.

ಈಗ ಎನ್‌ಡಿಎ ಸರ್ಕಾರ ರಚನೆಯಾದರೆ ಎನ್.ಬಿರೇನ್ ಸಿಂಗ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆಯೇ? ಅಥವ ಕುಕಿ ಸಮಯದಾಯದ ನಾಯಕರಿಗೆ ಸಿಎಂ ಪಟ್ಟ ನೀಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ. ಕುಕಿ ಸಮುದಾಯದ ನಾಯಕರು ಸರ್ಕಾರದ ಭಾಗವಾಗಲು ಒಪ್ಪಿಗೆ ಕೊಟ್ಟಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular