ಭಾರತೀಯರಿಗೆ ಚಿನ್ನ ಎನ್ನುವುದು ಕೇವಲ ಹೂಡಿಕೆಯಲ್ಲ, ಅದು ಮೌಲ್ಯದ ದೈನಂದಿನ ಸಂಕೇತ. ಷೇರು ಮಾರುಕಟ್ಟೆ ಅಥವಾ ಪೆಟ್ರೋಲ್ ಬೆಲೆಯನ್ನು ಗಮನಿಸುವಷ್ಟೇ ಸಹಜವಾಗಿ ಜನರು ಇಂದಿನ ಚಿನ್ನದ ಬೆಲೆಯನ್ನು ಪರಿಶೀಲಿಸುತ್ತಾರೆ. ಏಕೆಂದರೆ ನಮ್ಮ ಮದುವೆಗಳು, ಹಬ್ಬಗಳು ಮತ್ತು ಉಳಿತಾಯದ ಯೋಜನೆಗಳೆಲ್ಲವೂ ಈ ಬಂಗಾರದ ಮೇಲೆ ಅವಲಂಬಿತವಾಗಿವೆ.ಆದರೆ ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ನೋಡಿ ಗ್ರಾಹಕರು ಕಂಗಾಲಾಗಿದ್ದರು. ಇದೀಗ ಅಂತಹವರಿಗೊಂದು ಸಿಹಿ ಸುದ್ದಿ ಇದೆ. ಇಂದು (ಫೆಬ್ರವರಿ 3, 2026) ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ.
ಬೆಲೆ ಇಳಿಕೆಗೆ ಕಾರಣವೇನು?
ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳು ಮತ್ತು ಕೇಂದ್ರ ಬಜೆಟ್ ನಂತರದ ಸುಂಕದ ಪರಿಣಾಮವಾಗಿ ಚಿನ್ನದ ದರದಲ್ಲಿ ಈ ಇಳಿಕೆ ಕಂಡುಬಂದಿದೆ. ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ದರ ಇಳಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ದೊಡ್ಡ ಸಮಾಧಾನ ತಂದಿದೆ.
ಕಳೆದ ಕೆಲವು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ದರ ಇಂದು ದಿಢೀರ್ ಕುಸಿತ ಕಂಡಿದೆ. 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎರಡೂ ವಿಭಾಗಗಳಲ್ಲಿ ಬೆಲೆ ಇಳಿಕೆಯಾಗಿದ್ದು, ಮದುವೆ ಹಾಗೂ ಶುಭ ಕಾರ್ಯಗಳಿಗೆ ಚಿನ್ನ ಖರೀದಿಸುವವರಿಗೆ ಇದು ಸುಸಮಯ.
24 ಕ್ಯಾರೆಟ್ ಚಿನ್ನದ ದರ ಪ್ರಮಾಣ,ಇಂದಿನ ದರ,ನಿನ್ನೆಯ ದರ,ವ್ಯತ್ಯಾಸ
| ಪ್ರಮಾಣ | ಇಂದಿನ ದರ | ನಿನ್ನೆಯ ದರ | ವ್ಯತ್ಯಾಸ |
| 1 ಗ್ರಾಂ | ₹15,175 | ₹15,317 | ₹142 ಇಳಿಕೆ |
| 8 ಗ್ರಾಂ | ₹1,21,400 | ₹1,22,536 | ₹1,136 ಇಳಿಕೆ |
| 10 ಗ್ರಾಂ | ₹1,51,750 | ₹1,53,170 | ₹1,420 ಇಳಿಕೆ |
| 100 ಗ್ರಾಂ | ₹15,17,500 | ₹15,31,700 | ₹14,200 ಇಳಿಕೆ |
22 ಕ್ಯಾರೆಟ್ ಚಿನ್ನದ ದರ (ಆಭರಣ ಚಿನ್ನ)
| ಪ್ರಮಾಣ | ಇಂದಿನ ದರ | ನಿನ್ನೆಯ ದರ | ವ್ಯತ್ಯಾಸ |
| 1 ಗ್ರಾಂ | ₹13,910 | ₹14,040 | ₹130 ಇಳಿಕೆ |
| 8 ಗ್ರಾಂ | ₹1,11,120 | ₹1,12,160 | ₹1,040 ಇಳಿಕೆ |
| 10 ಗ್ರಾಂ | ₹1,39,100 | ₹1,40,400 | ₹1,300 ಇಳಿಕೆ |
| 100 ಗ್ರಾಂ | ₹13,91,000 | ₹14,04,000 | ₹13,000 ಇಳಿಕೆ |
ಭಾರತದ ವಿವಿಧ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (ಪ್ರತಿ ಗ್ರಾಂ)
ಬೆಂಗಳೂರು ₹15,175
ಚೆನ್ನೈ ₹15,306
ಮುಂಬೈ ₹15,175
ದೆಹಲಿ – ₹15,190
ಕೋಲ್ಕತ್ತಾ ₹15,175
ಹೈದರಾಬಾದ್ ₹15,175
ಕೇರಳ ₹15,175
ಪುಣೆ ₹15,175
ವಡೋದರಾ ₹15,180
ಅಹಮದಾಬಾದ್ ₹15,180
ಬೆಳ್ಳಿ ದರ
ಭಾರತದಲ್ಲಿ ಇಂದು ಬೆಳ್ಳಿ ದರದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಒಂದು ಗ್ರಾಂ ಬೆಳ್ಳಿ ದರ ಇಂದು ₹280 ಆಗಿದ್ದು, ನಿನ್ನೆ ₹300 ಇತ್ತು. ಇದರಿಂದ ನಿನ್ನೆಗಿಂತ ಇಂದು ಬರೋಬ್ಬರಿ ₹20 ಇಳಿಕೆ ಕಂಡಿದೆ.
ಅದೇ ರೀತಿ, 8 ಗ್ರಾಂ ಬೆಳ್ಳಿ ದರ ಇಂದು ₹2,240 ಆಗಿದ್ದು, ನಿನ್ನೆ ₹2,400 ಇತ್ತು. ಈ ಮೂಲಕ ₹160 ಇಳಿಕೆಯಾಗಿದೆ.ಇನ್ನೂ 10 ಗ್ರಾಂ ಬೆಳ್ಳಿ ದರ ₹2,800 ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,000 ಆಗಿದ್ದು, 1000 ಗ್ರಾಂ (1 ಕೆಜಿ) ಬೆಳ್ಳಿ ದರ ₹2,80,000ಕ್ಕೆ ತಲುಪಿದೆ.

