HomeLatest Newsತನ್ವೀರ್ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ: ಕಾಂಗ್ರೆಸ್ ವಿರುದ್ಧ ಘೋಷಣೆ, ಈ ಪಕ್ಷ ಬೇಡ ರಾಜೀನಾಮೆ...

ತನ್ವೀರ್ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ: ಕಾಂಗ್ರೆಸ್ ವಿರುದ್ಧ ಘೋಷಣೆ, ಈ ಪಕ್ಷ ಬೇಡ ರಾಜೀನಾಮೆ ಬಿಸಾಕಿ ಎಂದ ಕಾರ್ಯಕರ್ತರು!

ಮೈಸೂರು-ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ಅವರ ನಿವಾಸದ ಬಳಿ ಬೆಂಬಲಿಗರು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಜೀನಾಮೆಗೆ ಒತ್ತಾಯ, ಘೋಷಣೆಗಳ ಅಬ್ಬರ

ಪ್ರತಿಭಟನಾ ನಿರತರಾದ ಕಾರ್ಯಕರ್ತರು “ರಾಜೀನಾಮೆ ಕೊಟ್ಟುಬಿಡಿ ಸರ್”, “ಪಕ್ಷವಿರೋಧಿಗಳಿಗೆ ಸಚಿವ ಸ್ಥಾನ ನೀಡುತ್ತಾರೆ, ನಮಗೇಕೆ ನ್ಯಾಯ ಇಲ್ಲ?”, “ಪೇಮೆಂಟ್ ಗಿರಾಕಿಗಳಿಗೆ ಮಂತ್ರಿಗಿರಿ, ನಿಷ್ಠಾವಂತರಿಗೆ ಅನ್ಯಾಯ” ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

“ನೀವೇನೂ ತಪ್ಪು ಮಾಡಿಲ್ಲ. ನೆನ್ನೆ-ಮೊನ್ನೆ ಬಂದವರಿಗೆ, ಪಕ್ಷಕ್ಕೆ ಮೋಸ ಮಾಡಿದವರಿಗೆ ಸ್ಥಾನ ಕೊಡುತ್ತಾರೆ. ಇಂತಹ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಥವೇ ಇಲ್ಲ” ಎಂದು ಬೆಂಬಲಿಗರು ತನ್ವೀರ್ ಸೇಠ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೈಕಮಾಂಡ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, “ಅನ್ಯಾಯದ ವಿರುದ್ಧ ಕಠಿಣ ನಿಲುವು ತಾಳಬೇಕು. ಅಗತ್ಯವಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಹೋರಾಟ ನಡೆಸಿ” ಎಂದು ಒತ್ತಾಯಿಸಿದರು.

ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚರ್ಚೆ

ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ತನ್ವೀರ್ ಸೇಠ್ ಅವರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular