ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ತಮ್ಮ ಗತಕಾಲದ ಕಠಿಣ ದಿನಗಳನ್ನು ಹಾಗೂ ಜೈಲು ಜೀವನದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಸಹೋದರ ಸೊಹೈಲ್ ಖಾನ್ ಸ್ಪರ್ಧಿಯಾಗಿರುವ ಈ ಕಾರ್ಯಕ್ರಮದ ಪ್ರೋಮೋ ಒಂದರಲ್ಲಿ ಸಲ್ಮಾನ್, ಜೈಲಿನಲ್ಲಿನ ರಿಯಾಲಿಟಿಯನ್ನು ಹಂಚಿಕೊಂಡಿದ್ದಾರೆ.
ಅನೇಕ ವರ್ಷಗಳ ಹಿಂದೆ ಜೈಲಿನಲ್ಲಿದ್ದಾಗ ಅತ್ಯಂತ ಸಣ್ಣ ಜಾಗದಲ್ಲಿ ಸುಮಾರು 50ರಿಂದ 70 ಜನರು ವಾಸಿಸುತ್ತಿದ್ದರು ಎಂದು ಸಲ್ಮಾನ್ ಹೇಳಿದ್ದಾರೆ. ಅಲ್ಲಿ ಎಲ್ಲರಿಗೂ ಸೇರಿ ಕೇವಲ ಒಂದೇ ಒಂದು ಇಂಡಿಯನ್ ಶೈಲಿಯ ಶೌಚಾಲಯವಿತ್ತು. ಅಲ್ಲಿ ಶೌಚಾಲಯದ ಸ್ವಚ್ಛತೆ ತೀರಾ ಕೆಟ್ಟದಾಗಿತ್ತು ಮತ್ತು ಕ್ರಿಮಿಕೀಟಗಳು ಹಾಗೂ ಹಲ್ಲಿಗಳ ಕಾಟವೂ ಹೆಚ್ಚಾಗಿತ್ತು ಎಂದು ಅವರು ಜೈಲಿನ ಪರಿಸ್ಥಿತಿಯನ್ನು ನೆನಪಿಸಿಕೊಂಡಿದ್ದಾರೆ.
ಇದರ ಜೊತೆಗೆ ತಮ್ಮ ಕೆಲಸದ ಶ್ರದ್ಧೆ ಹಾಗೂ ನಿದ್ರೆಯ ಅಭ್ಯಾಸದ ಬಗ್ಗೆಯೂ ಮಾತನಾಡಿರುವ ಅವರು, ಎಷ್ಟೇ ದಣಿದಿದ್ದರೂ ನೆಪಗಳನ್ನು ಹೇಳದೆ ಕೆಲಸ ಮಾಡಬೇಕು ಎಂದಿದ್ದಾರೆ. ತಾವು ದಿನಕ್ಕೆ ಕೇವಲ ಒಂದೂವರೆಯಿಂದ ಎರಡು ಗಂಟೆ ಮಾತ್ರ ನಿದ್ರಿಸುವುದಾಗಿ ತಿಳಿಸಿದ ಅವರು, ಜೈಲಿನಲ್ಲಿದ್ದಾಗ ಕಷ್ಟಕರ ಸನ್ನಿವೇಶ ಎದುರಾದಾಗಲೂ ಧೈರ್ಯಗೆಡದೆ ಕಾಲ ಕಳೆದಿರುವುದಾಗಿ ಹೇಳಿದ್ದಾರೆ. 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಜೈಲು ಶಿಕ್ಷೆ ಅನುಭವಿಸಿದ್ದರು.
Sohail Khan & all the housemates are visibly emotional as #SalmanKhan opens up about the hardships & difficult moments he went through during his time in jail. The way Bhai describes everything is deeply moving, leaving everyone emotional & silent #Alliance…
— Sohail. (@BeingSohail__) August 3, 2026

