ಚೆನ್ನೈ: ಮಕ್ಕಳ ಬಗ್ಗೆ ಪೋಷಕರು ಕೊಂಚ ಗಮನ ಹರಿದದಿದ್ದರೂ ಮಕ್ಕಳು ಎಂತಹ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ ಈ ದುರಂತ ಸಾಕ್ಷಿ. ಮನೆಯ ಮುಂದೆ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ನೀರಿನ ಟ್ಯಾಂಕ್‌ಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ದುರಂತ ಸಂಭವಿಸಿದೆ. ಧ್ವನ್ವಂತ್ ಮೃತ ಮಗು. ಕೊಯಮತ್ತೂರು ಜಿಲ್ಲೆಯ ರತ್ನಗಿರಿ ಬಳಿಯ ವೌಸಿ ನಗರದ ನಿವಾಸಿ ವೇಣುಗೋಪಾಲ್ ಹಾಗೂ ಕಲೈವಾಣಿ ದಂಪತಿಯ ಪುತ್ರ.
ಮಗು ಧನ್ವಂತ್ ಎಂದಿನಂತೆ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ. ಆ ಸಮಯದಲ್ಲಿ, ಅವನು ಅನಿರೀಕ್ಷಿತವಾಗಿ ಆ ಪ್ರದೇಶದಲ್ಲಿನ ನೀರಿನ ಸಂಪ್ಗೆ ಬಿದ್ದಿದ್ದಾನೆ. ಟ್ಯಾಂಕ್‌ನ ಮೇಲ್ಭಾಗದಲ್ಲಿ ಇರಿಸಲಾದ ಟಿನ್ ಪ್ಲೇಟ್ ಸರಿಯಾಗಿ ಮುಚ್ಚದ ಕಾರಣ ಮಗು ಆಕಸ್ಮಿಕವಾಗಿ ನೀರಿನ ಸಂಪ್ ಗೆ ಬಿದ್ದು ಮೃತಪಟ್ಟಿದೆ. ಮಗು ಆಟವಾಡುತ್ತಿದೆ ಎಂದು ಪೋಷಕರು ಸುಮ್ಮನಾಗಿದ್ದಾರೆ.
ಎಷ್ಟು ಹೊತ್ತಾದರೂ ಮಗುವಿನ ಸುಳಿವಿಲ್ಲದಾಗ ಪೋಷಕರು ಮನೆ ಹೊರಗೆ ಬಂದು ನೋಡಿದ್ದಾರೆ. ಎಲ್ಲಿಯೂ ಮಗು ಕಾಣುತ್ತಿಲ್ಲ. ಮನೆ ಮುಂದೆ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿದೆ. ಕಂಗಾಲಾದ ಪೋಷಕರು ಅಕ್ಕಪಕ್ಕದ ಮನೆಯವರನ್ನು ಕೇಳಿದ್ದಾರೆ. ಮನೆ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಆದರೂ ಮಗು ಪತ್ತೆಯಾಗಿಲ್ಲ.
ಮಗು ಅಲ್ಲಿಯೂ ಕಾಣದಿದ್ದಾಗ ಪೋಷಕರು ಅಳಳಾರಂಭಿಸಿದ್ದಾರೆ.ಆಗ ನೆರೆಹೊರೆಯ ಜನರು ಜಮಾಯಿಸಿ ಮಗುವನ್ನು ಹುಡುಕಲು ಪ್ರಯತ್ನಿಸಿದರು. ಸ್ವಲ್ಪ ಸಮಯದ ನಂತರ, ಅನುಮಾನಗೊಂಡ ಪೋಷಕರು ಮನೆಯ ನೆಲ ಮಹಡಿಯಲ್ಲಿರುವ ನೀರಿನ ಟ್ಯಾಂಕ್ ಅನ್ನು ನೋಡಿದಾಗ, ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ನೀರಿನ ಸಂಪ್ ನಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣ, ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ರತ್ನಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ರತ್ನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಸಂಪ್ ಮೇಲೆ ಇರಿಸಲಾಗಿದ್ದ ಟಿನ್ ಪ್ಲೇಟ್ ಸರಿಯಾಗಿ ಮುಚ್ಚಿಲ್ಲ, ಮಗು ಅದರ ಮೇಲೆ ಹತ್ತಿದಾಗ ಆಕಸ್ಮಿಕವಾಗಿ ಟ್ಯಾಂಕ್ ಗೆ ಮಗು ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮಗು ಆಟವಾಡುತ್ತಿದೆ ಎಂಬ ಪೋಷಕರ ಸಣ್ಣ ನಿರ್ಲಕ್ಷ ಎಂತಹ ಅನಾಹುತವನ್ನುಂಟು ಮಾಡಿದೆ. ಪೋಷಕರ ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

