HomeLatest Newsಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ; ತಮಿಳುನಾಡಿನಲ್ಲಿ ಕಾಮುಕ ಉದ್ಯಮಿಯ ಅಸಹ್ಯ ಕೃತ್ಯ ಬಯಲು!

ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ; ತಮಿಳುನಾಡಿನಲ್ಲಿ ಕಾಮುಕ ಉದ್ಯಮಿಯ ಅಸಹ್ಯ ಕೃತ್ಯ ಬಯಲು!

ತಮಿಳುನಾಡಿನ ರಾಜಧಾನಿ ಚೆನ್ನೈನ ಅಯನಾವರಂ ಪ್ರದೇಶದಲ್ಲಿ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ನೆರೆಮನೆಯ ಮಹಿಳಾ ವೈದ್ಯೆಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುತ್ತಾ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಘಟನೆಯ ವಿವರ: ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಮಹಿಳೆ ಶನಿವಾರ ತಮ್ಮ ಮನೆಯ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ, ಯಾರೋ ಕಿಟಕಿಯ ಮೂಲಕ ಮೊಬೈಲ್ ಕ್ಯಾಮೆರಾ ಹಿಡಿದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಅವರು ತನ್ನ ತಾಯಿಗೆ ವಿಷಯ ತಿಳಿಸಿದ್ದಾರೆ. ತಾಯಿ ತಕ್ಷಣ ಹೊರಗೆ ಬಂದು ನೋಡಿದಾಗ, ನೆರೆಮನೆಯಲ್ಲಿ ವಾಸವಿದ್ದ 57 ವರ್ಷದ ಉದ್ಯಮಿ ನಂದಕುಮಾರ್ ಎಂಬಾತ ಟೆರೇಸ್ ಮೇಲೆ ನಿಂತು ಮೊಬೈಲ್ ಅನ್ನು ಬಾತ್‌ರೂಮ್‌ನತ್ತ ಗುರಿ ಇಟ್ಟುಕೊಂಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ದೊಡ್ಡ ಗಲಾಟೆಯೇ ನಡೆದಿದೆ.

ಪೋನ್‌ನಲ್ಲಿ ಸಿಕ್ಕಿತು ಆಘಾತಕಾರಿ ಸಾಕ್ಷಿ: ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ನಂದಕುಮಾರ್‌ನನ್ನು ವಶಕ್ಕೆ ಪಡೆದು ಆತನ ಮೊಬೈಲ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತನ ಫೋನ್‌ನಲ್ಲಿ ಹತ್ತಾರು ವಿಡಿಯೋ ಕ್ಲಿಪ್‌ಗಳು ಪತ್ತೆಯಾಗಿದ್ದು, ಆತ ದೀರ್ಘಕಾಲದಿಂದ ಇಂತಹ ವಿಕೃತ ಕೃತ್ಯಗಳಲ್ಲಿ ತೊಡಗಿದ್ದ ಎಂಬುದು ಸಾಬೀತಾಗಿದೆ. ಈ ಪ್ರಕರಣ ದಾಖಲಾದ ಮೂರು ದಿನಗಳ ನಂತರ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಆತ ಜೈಲು ಪಾಲಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸ್ಟೆಲ್‌ನಲ್ಲೂ ಗುಪ್ತ ಕ್ಯಾಮೆರಾ ಹಾವಳಿ: ತಮಿಳುನಾಡಿನ ಕೃಷ್ಣಗಿರಿಯ ಟಾಟಾ ಎಲೆಕ್ಟ್ರಾನಿಕ್ಸ್‌ನ ಮಹಿಳಾ ಹಾಸ್ಟೆಲ್‌ನಲ್ಲಿಯೂ ಇಂತಹುದೇ ಘಟನೆ ವರದಿಯಾಗಿದೆ. ಅಲ್ಲಿನ ಬಾತ್‌ರೂಮ್‌ನಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿದ್ದ ಆರೋಪದ ಮೇಲೆ ಅದೇ ಸಂಸ್ಥೆಯ ಮಹಿಳಾ ಉದ್ಯೋಗಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಈ ಘಟನೆಯನ್ನು ಪ್ರತಿಭಟಿಸಿ ಸಾವಿರಾರು ಮಹಿಳಾ ಉದ್ಯೋಗಿಗಳು ರಸ್ತೆಗಿಳಿದಿದ್ದರು. ಪೊಲೀಸರು ಈಗ ಹಾಸ್ಟೆಲ್‌ನಾದ್ಯಂತ ತಪಾಸಣೆ ನಡೆಸುತ್ತಿದ್ದು, ಮತ್ಯಾವುದೇ ಕ್ಯಾಮೆರಾಗಳು ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ಸರಣಿ ಘಟನೆಗಳು ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದ್ದು, ಸಾರ್ವಜನಿಕ ಸ್ಥಳಗಳು ಮಾತ್ರವಲ್ಲದೆ ಸ್ವಂತ ಮನೆಯಲ್ಲೂ ಎಚ್ಚರದಿಂದ ಇರಬೇಕಾದ ಅನಿವಾರ್ಯತೆಯನ್ನು ನೆನಪಿಸಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular