HomeEntertainment'ಟೇಕ್ವಾಂಡೋ ಗರ್ಲ್' ಚಿತ್ರದ ಟ್ರೈಲರ್ ರಿಲೀಸ್

‘ಟೇಕ್ವಾಂಡೋ ಗರ್ಲ್’ ಚಿತ್ರದ ಟ್ರೈಲರ್ ರಿಲೀಸ್

ರವೀಂದ್ರ ವಂಶಿ ನಿರ್ದೇಶನದ ‘ಟೇಕ್ವಾಂಡೋ ಗರ್ಲ್’ ಎಂಬ ಮಹಿಳಾ ಪ್ರಧಾನ ಚಿತ್ರದ ಟ್ರೈಲರ್ ಅನ್ನು  ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ನೋಡುಗರ ಗಮನ ಸೆಳೆದಿದೆ.

ಈ ಚಿತ್ರವನ್ನು ಆತ್ರೇಯ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಡಾ. ಸುಮಿತಾ ಪ್ರವೀಣ್ ನಿರ್ಮಾಣ ಮಾಡಿದ್ದು, ಪ್ರವೀಣ್ ಸಿ ಬಾನು ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಎಂ ಎಸ್ ತ್ಯಾಗರಾಜ ಸಂಗಿತ ಸಂಯೋಜನೆ ನೀಡಿದ್ದಾರೆ.

ರುತ್ತು ಸ್ಪರ್ಶ ಸೇರಿದಂತೆ ಡಾ. ಸುಮಿತಾ ಪ್ರವೀಣ್, ಸಹನಾ ಶ್ರೀ, ಪಲ್ಲವಿ ರಾವ್, ಮಾಸ್ಟರ್ ವಿಫಾ ರವಿ, ರೇಖಾ ಕೂಡ್ಲಿಗಿ, ಸ್ವಾತಿ ಶಿವಮೊಗ್ಗ ಬಣ್ಣ ಹಚ್ಚಿದ್ದಾರೆ. ಪುಷ್ಕರ ಗಿರಿಗೌಡ ಸಂಕಲನ, ಅನಿರುದ್ ಛಾಯಾಗ್ರಹಣ ಹಾಗೂ ಜಯಂತ್ ಎಚ್ಎಂ ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular