ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
ಇನ್ನು ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ಪ್ರವೇಶಿಸುವ ಅರ್ಹತೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲಿದೆ. ಹೀಗೆ ಈ ಪಂದ್ಯ ಎರಡು ತಂಡಗಳಿಗೂ ಅತಿ ಮುಖ್ಯವಾಗಿದ್ದು, ಟೀಮ್ ಇಂಡಿಯಾಗೂ ಸಹ ಈ ಪಂದ್ಯದ ಫಲಿತಾಂಶ ಪ್ರಮುಖದ್ದಾಗಿದೆ.
ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ದಕ್ಷಿಣ ಆಫ್ರಿಕಾ ಮಣಿಸಿದರೆ ಭಾರತ ತನ್ನ ಉಳಿದ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳನ್ನು ಗೆದ್ದರೆ ಸಾಕು ನೇರವಾಗಿ ಸೆಮಿ ಫೈನಲ್ ಪ್ರವೇಶಿಸಲಿದೆ.
ದಕ್ಷಿಣ ಆಫ್ರಿಕಾ ತಂಡವನ್ನು ವೆಸ್ಟ್ ಇಂಡೀಸ್ ಮಣಿಸಿದರೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ನೂರಕ್ಕೂ ಹೆಚ್ಚು ರನ್ ಅಂತರದಿಂದ ಗೆಲ್ಲಲೇಬೇಕು. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಕಡ್ಡಾಯವಾಗಿ ಗೆದ್ದರೆ ಪೈಪೋಟಿ ನೀಡಬಹುದಾಗಿದೆ.
ಹೀಗಾಗಿ ಈ ಪಂದ್ಯ ಭಾರತ ತಂಡಕ್ಕೂ ಸಹ ಅತಿ ಮುಖ್ಯವಾಗಿದೆ.
ವೆಸ್ಟ್ ಇಂಡೀಸ್ ಆಡುವ ಬಳಗ: ಬ್ರಾಂಡನ್ ಕಿಂಗ್, ಶಾಯ್ ಹೋಪ್ (ನಾಯಕ ಹಾಗೂ ವಿಕೆಟ್ ಕೀಪರ್ ), ಶಿಮ್ರಾನ್ ಹೆಟ್ಮೈಯರ್, ರೊವ್ಮನ್ ಪೌವೆಲ್, ಶೆರ್ಫೇನ್ ರದರ್‌ಫರ್ಡ್, ರೊಸ್ಟನ್ ಚೇಸ್, ರೊಮಾರಿಯೊ ಶೆಪರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ಗುಡಾಕೇಶ್ ಮೋಟಿ, ಶಮಾರ್ ಜೋಸೆಫ್
ದಕ್ಷಿಣ ಆಫ್ರಿಕಾ ಆಡುವ ಬಳಗ: ಏಡನ್ ಮಾರ್ಕ್ರಾಮ್(ನಾಯಕ ), ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ರಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ಮಾರ್ಕೋ ಜಾನ್ಸನ್, ಕಾರ್ಬಿನ್ ಬೋಶ್, ಕಗಿಸೋ ರಬಾಡಾ, ಕೇಶವ್ ಮಹಾರಾಜ್, ಲುಂಗಿ ನ್ಗಿಡಿ

