HomeIndiaಜಿಯೋ ಗ್ರಾಹಕರಿಗೆ ಬಂಪರ್ ಆಫರ್; ಒಂದು ತಿಂಗಳು ರೀಚಾರ್ಜ್ ಮಾಡಿದರೆ ಮತ್ತೊಂದು ತಿಂಗಳು ಉಚಿತ!

ಜಿಯೋ ಗ್ರಾಹಕರಿಗೆ ಬಂಪರ್ ಆಫರ್; ಒಂದು ತಿಂಗಳು ರೀಚಾರ್ಜ್ ಮಾಡಿದರೆ ಮತ್ತೊಂದು ತಿಂಗಳು ಉಚಿತ!

ಪ್ರತಿ ತಿಂಗಳು ಮೊಬೈಲ್ ರೀಚಾರ್ಜ್‌ಗೆ ಹಣ ಮೀಸಲಿಡುವ ಗ್ರಾಹಕರಿಗೆ ಒಂದು ಒಳ್ಳೆಯ ಸುದ್ದಿ. ಇನ್ಮುಂದೆ ಒಂದು ತಿಂಗಳ ರೀಚಾರ್ಜ್ ಮಾಡಿಸಿದರೆ ಮುಂದಿನ ತಿಂಗಳೂ ಉಚಿತವಾಗಿ ಮೊಬೈಲ್ ಸೇವೆ ಪಡೆಯುವ ಅವಕಾಶ ಸಿಗಲಿದೆ. ಹೌದು, ರಿಲಯನ್ಸ್ ಜಿಯೋ ತನ್ನ ಆಯ್ದ ಗ್ರಾಹಕರಿಗೆ ‘ಬೈ ಒನ್ ಗೆಟ್ ಒನ್’ (Buy One Get One) ವಿಶೇಷ ಆಫರ್ ಪರಿಚಯಿಸಿದೆ. ಈ ಆಫರ್ ಮೂಲಕ ಗ್ರಾಹಕರು ಒಂದು ರೀಚಾರ್ಜ್‌ನಲ್ಲೇ ಎರಡು ತಿಂಗಳ ಪ್ರಯೋಜನ ಪಡೆಯಬಹುದು.

ಸಾಮಾನ್ಯವಾಗಿ ಪ್ರತಿ 28 ದಿನಗಳಿಗೊಮ್ಮೆ ರೀಚಾರ್ಜ್ ಮಾಡಿಸಬೇಕಾದ ಅನಿವಾರ್ಯತೆ ಇರುತ್ತದೆ. ಇದರಿಂದ ಮೊಬೈಲ್ ಬಳಕೆಗೆ ಪ್ರತಿತಿಂಗಳು ಹಣ ಖರ್ಚಾಗುತ್ತದೆ. ಆದರೆ ಜಿಯೋದ ಈ ಹೊಸ ಆಫರ್ ಲಭ್ಯವಿರುವ ಗ್ರಾಹಕರಿಗೆ ಒಂದು ತಿಂಗಳ ರೀಚಾರ್ಜ್ ಮಾಡಿದರೆ ಮತ್ತೊಂದು ತಿಂಗಳ ರೀಚಾರ್ಜ್ ಉಚಿತವಾಗಿ ದೊರೆಯಲಿದೆ. ಇದರಿಂದ ರೀಚಾರ್ಜ್ ವೆಚ್ಚದಲ್ಲಿ ಹಣ ಉಳಿಸಬಹುದು.

ಆದರೆ, ಈ ಆಫರ್ ಪಡೆಯಲು ಕೆಲವು ಷರತ್ತುಗಳಿವೆ. ಮುಖ್ಯವಾಗಿ, ಗ್ರಾಹಕರು ಮೈ ಜಿಯೋ (MyJio) ಆ್ಯಪ್ ಮೂಲಕವೇ ರೀಚಾರ್ಜ್ ಮಾಡಿಸಬೇಕು. ಗೂಗಲ್ ಪೇ, ಫೋನ್‌ಪೇ ಸೇರಿದಂತೆ ಇತರ ಯುಪಿಐ ಆ್ಯಪ್‌ಗಳ ಮೂಲಕ ರೀಚಾರ್ಜ್ ಮಾಡಿದರೆ ಈ ಆಫರ್ ಅನ್ವಯಿಸುವುದಿಲ್ಲ. ಈ ಕುರಿತು ಜಿಯೋ ಆಯ್ದ ಗ್ರಾಹಕರಿಗೆ ಎಸ್‌ಎಂಎಸ್ ಮೂಲಕವೂ ಮಾಹಿತಿ ನೀಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

₹299, ₹349 ಪ್ಲಾನ್‌ಗಳಿಗೆ ಬಂಪರ್ ಆಫರ್!

ಜಿಯೋ ತನ್ನ ₹299 ಮತ್ತು ₹349 ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳಿಗೆ ಈ ವಿಶೇಷ ಆಫರ್ ನೀಡುತ್ತಿದೆ. ಈ ಪ್ಲಾನ್‌ಗಳ ಸಾಮಾನ್ಯ ವ್ಯಾಲಿಡಿಟಿ 28 ದಿನಗಳು. ಬೈ ಒನ್ ಗೆಟ್ ಒನ್ ಆಫರ್ ಲಭ್ಯವಿದ್ದರೆ ಒಂದು ರೀಚಾರ್ಜ್‌ಗೆ ಮತ್ತೊಂದು ಉಚಿತ ರೀಚಾರ್ಜ್ ಸೌಲಭ್ಯ ಸಿಗುತ್ತದೆ.

ಇದರಿಂದ ಗ್ರಾಹಕರು ಒಟ್ಟು 58 ದಿನಗಳವರೆಗೆ ರೀಚಾರ್ಜ್ ಪ್ರಯೋಜನ ಪಡೆಯಬಹುದು. ಅನಿಯಮಿತ ವಾಯ್ಸ್ ಕಾಲ್ ಹಾಗೂ ಪ್ರತಿದಿನ 2GB ಡೇಟಾ ಸೇರಿದಂತೆ ಸಂಬಂಧಿತ ಪ್ಲಾನ್‌ನ ಪ್ರಯೋಜನಗಳು ದೊರೆಯಲಿವೆ ಎಂದು ವರದಿಯಾಗಿದೆ.

ಉಚಿತ ರೀಚಾರ್ಜ್ ಪಡೆಯುವುದು ಹೇಗೆ?

ಈ ಆಫರ್ ಪಡೆಯಲು ಗ್ರಾಹಕರು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು.

  1. ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ MyJio ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

  2. ನಿಮ್ಮ ಜಿಯೋ ಮೊಬೈಲ್ ಸಂಖ್ಯೆಯ ಮೂಲಕ ಆ್ಯಪ್‌ಗೆ ಲಾಗಿನ್ ಆಗಿ.

  3. ಹೋಮ್ ಪೇಜ್‌ನಲ್ಲಿ ಉಚಿತ ರೀಚಾರ್ಜ್ ಆಫರ್ ಬ್ಯಾನರ್ ಇದೆಯೇ ಎಂದು ಪರಿಶೀಲಿಸಿ.

  4. ಆಫರ್ ಲಭ್ಯವಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ.

  5. ₹299 ಅಥವಾ ₹349 ರೀಚಾರ್ಜ್ ಪ್ಲಾನ್‌ಗಳನ್ನು ಪರಿಶೀಲಿಸಿ.

  6. ಪ್ಲಾನ್‌ನಲ್ಲಿ ‘Buy One Get One’ ಎಂದು ನಮೂದಿಸಿದ್ದರೆ ಮಾತ್ರ ಆಫರ್ ನಿಮಗೆ ಲಭ್ಯವಿದೆ ಎಂದರ್ಥ.

  7. ನಂತರ ಆ ಪ್ಲಾನ್ ಆಯ್ಕೆ ಮಾಡಿಕೊಂಡು ರೀಚಾರ್ಜ್ ಪೂರ್ಣಗೊಳಿಸಿ.

ಯಾರಿಗೆ ಸಿಗಲಿದೆ ಈ ಆಫರ್?

ಈ ವಿಶೇಷ ಆಫರ್ ಎಲ್ಲಾ ಜಿಯೋ ಗ್ರಾಹಕರಿಗೂ ಲಭ್ಯವಿಲ್ಲ. ದೀರ್ಘಕಾಲದಿಂದ ರೀಚಾರ್ಜ್ ಮಾಡಿಸದೆ ಇರುವ ಕೆಲವು ಆಯ್ದ ಗ್ರಾಹಕರಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಪ್ರಸ್ತುತ ಪ್ಲಾನ್‌ನ ವ್ಯಾಲಿಡಿಟಿ ಮುಗಿದ ಬಳಿಕ ಉಚಿತ ಪ್ಲಾನ್ ಸ್ವಯಂಚಾಲಿತವಾಗಿ ಸಕ್ರಿಯವಾಗಲಿದೆ ಎಂದು ತಿಳಿಸಲಾಗಿದೆ.

ಹೀಗಾಗಿ, ಜಿಯೋ ಗ್ರಾಹಕರು ರೀಚಾರ್ಜ್ ಮಾಡುವ ಮುನ್ನ ಒಮ್ಮೆ MyJio ಆ್ಯಪ್ ಪರಿಶೀಲಿಸುವುದು ಉತ್ತಮ. ನಿಮ್ಮ ಸಂಖ್ಯೆಗೆ ಈ ಆಫರ್ ಲಭ್ಯವಿದ್ದರೆ ಒಂದು ತಿಂಗಳ ರೀಚಾರ್ಜ್‌ನಲ್ಲೇ ಮತ್ತೊಂದು ತಿಂಗಳ ಪ್ರಯೋಜನ ಪಡೆಯಬಹುದು.

ಸೂಚನೆ: ಈ ಆಫರ್ ಆಯ್ದ ಗ್ರಾಹಕರಿಗೆ ಮಾತ್ರ ಅನ್ವಯಿಸಬಹುದು. ರೀಚಾರ್ಜ್ ಮಾಡುವ ಮೊದಲು MyJio ಆ್ಯಪ್‌ನಲ್ಲಿ ಆಫರ್ ಲಭ್ಯತೆ, ವ್ಯಾಲಿಡಿಟಿ ಮತ್ತು ಷರತ್ತುಗಳನ್ನು ಖಚಿತಪಡಿಸಿಕೊಳ್ಳಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular