HomeLatest NewsT20 World Cup 2026: ಐರ್ಲೆಂಡ್‌ಗೆ ಬೃಹತ್ ಗೆಲುವು; 20 ತಂಡಗಳ ಪೈಕಿ ಟೂರ್ನಿಯಿಂದ ಹೊರಬಿದ್ದ...

T20 World Cup 2026: ಐರ್ಲೆಂಡ್‌ಗೆ ಬೃಹತ್ ಗೆಲುವು; 20 ತಂಡಗಳ ಪೈಕಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ

ಕೊಲಂಬೊದ ಸಿನ್ಹಳೀಸ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 22ನೇ ಪಂದ್ಯದಲ್ಲಿ ಐರ್ಲೆಂಡ್ ಒಮನ್ ವಿರುದ್ಧ 96 ರನ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 235 ರನ್ ಕಲೆಹಾಕಿ ಒಮನ್‌ಗೆ 236 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಒಮನ್ 18 ಓವರ್‌ಗಳಲ್ಲಿ 139 ರನ್‌ಗೆ ಆಲ್‌ಔಟ್ ಆಗುವ ಮೂಲಕ ಸೋಲನ್ನು ಅನುಭವಿಸಿದೆ. ಇದು ಒಮನ್ ಪಾಲಿಗೆ ಟೂರ್ನಿಯಲ್ಲಿ ಸಿಕ್ಕ ಮೂರನೇ ಸೋಲಾಗಿದ್ದು, ಆಡಿದ ಎಲ್ಲ ಪಂದ್ಯಗಳಲ್ಲೂ ಸೋತು ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿದೆ.

ಐರ್ಲೆಂಡ್ ಕಲೆಹಾಕಿದ ಮೊತ್ತ ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಕಲೆಹಾಕಿದ ಎರಡನೇ ಅತ್ಯಧಿಕ ರನ್ ಮೊತ್ತವಾಗಿದೆ. 2007ರ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಶ್ರೀಲಂಕಾ ಕೀನ್ಯಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐರ್ಲೆಂಡ್ ಇನ್ನಿಂಗ್ಸ್: ತಂಡದ ಪರ 64 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಟಿಮ್ ಟೆಕ್ಟರ್ 5, ರಾಸ್ ಅಡೈರ್ 14, ಹ್ಯಾರಿ ಟೆಕ್ಟರ್ 14, ಕರ್ಟಿಸ್ ಕ್ಯಾಂಪರ್ 12 ರನ್ ಗಳಿಸಿದರು. ಬಳಿಕ ಗ್ಯಾರೆಥ್ ಡೆಲಾನಿ ಹಾಗೂ ಲಾರ್ಕನ್ ಟಕ್ಕರ್ 101 ರನ್‌ಗಳ ಜತೆಯಾಟವನ್ನಾಡಿ ತಂಡವನ್ನು ಒಳ್ಳೆಯ ಹಂತಕ್ಕೆ ತಂದರು. ಗ್ಯಾರೆಥ್ ಡೆಲಾನಿ 30 ಎಸೆತಗಳಲ್ಲಿ 56 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಒಂದಾದ ಲಾರ್ಕನ್ ಟಕ್ಕರ್ ಹಾಗೂ ಜಾರ್ಕ್ ಡಾಕ್ರೆಲ್ 19 ಎಸೆತಗಳಲ್ಲಿ 70 ರನ್ ಜತೆಯಾಟವನ್ನಾಡಿ ಅಬ್ಬರಿಸಿದರು. ಲಾರ್ಕನ್ ಟಕ್ಕರ್ 51 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದರೆ, ಜಾರ್ಜ್ ಡಾಕ್ರೆಲ್ 9 ಎಸೆತಗಳಲ್ಲಿ 5 ಸಿಕ್ಸರ್ ಸಹಿತ ಅಜೇಯ 35 ರನ್ ಗಳಿಸಿದರು.

ಒಮನ್ ಪರ ಶಕೀಲ್ ಅಹ್ಮದ್ ಮೂರು ವಿಕೆಟ್, ಶಾ ಫೈಸಲ್ ಹಾಗೂ ಆಮೀರ್ ಕಲೀಮ್ ತಲಾ ಒಂದೊಂದು ವಿಕೆಟ್ ಪಡೆದರು.

ಒಮನ್ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರ ಆಮೀರ್ ಕಲೀಮ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಜತಿಂದರ್ ಸಿಂಗ್ 7 ರನ್ ಗಳಿಸಿದರು. ಆಶಿಶ್ ಒದೆದ್ರ 1, ಹಮ್ಮದ್ ಮಿರ್ಜಾ 46, ವಿನಾಯಕ್ ಶುಕ್ಲಾ ಡಕ್‌ಔಟ್, ಮೊಹಮ್ಮದ್ ನದೀಮ್ 1, ಜಿತೆನ್ ರಮನಂದಿ 3, ನದೀಮ್ ಖಾನ್ ಡಕ್‌ಔಟ್, ಸುಫ್ಯನ್ ಮೆಹ್ಮೂದ್ 10, ಶಕೀಲ್ ಅಹ್ಮದ್ 4 ಹಾಗೂ ಶಾ ಫೈಸಲ್ ಅಜೇಯ 9 ರನ್ ಕಲೆಹಾಕಿದರು.

ಐರ್ಲೆಂಡ್ ಪರ ಜೋಶ್ವ ಲಿಟಲ್ ಮೂರು ವಿಕೆಟ್, ಬ್ಯಾರಿ ಮೆಕ್‌ಕಾರ್ಟಿ ಹಾಗೂ ಮ್ಯಾಥ್ಯೂ ಹಂಫ್ರೈಸ್ ತಲಾ ಎರಡು ವಿಕೆಟ್ ಮತ್ತು ಜಾರ್ಜ್ ಡಾಕ್ರೆಲ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular