HomeLatest NewsT20 World Cup 2026: ಸಹೋದರರ ಅಬ್ಬರಕ್ಕೆ ತಲೆಬಾಗಿದ ನೇಪಾಳ; ಮೊದಲ ಪಂದ್ಯ ಗೆದ್ದುಬೀಗಿದ ಇಟಲಿ

T20 World Cup 2026: ಸಹೋದರರ ಅಬ್ಬರಕ್ಕೆ ತಲೆಬಾಗಿದ ನೇಪಾಳ; ಮೊದಲ ಪಂದ್ಯ ಗೆದ್ದುಬೀಗಿದ ಇಟಲಿ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 17ನೇ ಪಂದ್ಯದಲ್ಲಿ ಇಟಲಿ ನೇಪಾಳ ವಿರುದ್ಧ ಹತ್ತು ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಪಂದ್ಯವನ್ನು ಗೆದ್ದಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ಬೌಲಿಂಗ್ ಆರಿಸಿಕೊಂಡು ನೇಪಾಳ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ನೇಪಾಳ 19.3 ಓವರ್‌ಗಳಲ್ಲಿ 123 ರನ್‌ಗೆ ಆಲ್‌ಔಟ್ ಆಗಿ ಇಟಲಿಗೆ 124 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಇಟಲಿ ಮೋಸ್ಕ ಸಹೋದರರ ಅಬ್ಬರದ ನೆರವಿನಿಂದ 12.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 124 ರನ್ ಕಲೆಹಾಕಿ ಆಡಿದ ಮೊದಲ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೇ ಗೆಲುವಿನ ರುಚಿ ಸವಿದಿದೆ.

ನೇಪಾಳ ಇನ್ನಿಂಗ್ಸ್: ತಂಡದ ಪರ ಕುಶಾಲ್ ಭುರ್ಟೆಲ್ 5, ಆಸಿಫ್ ಶೈಖ್ 20, ನಾಯಕ ರೋಹಿತ್ ಪೌಡೆಲ್ 23, ದೀಪೇಂದ್ರ ಸಿಂಗ್ ಐರೆ 17, ಆರಿಫ್ ಶೈಖ್ 27, ಲೋಕೇಶ್ ಬಮ್ 3, ಗುಲ್ಸನ್ ಶಾ 3, ನಂದನ್ ಯಾದವ್ ಡಕ್‌ಔಟ್, ಸಂದೀಪ್ ಲಮಿಚ್ಚನೆ 5, ಲಲಿತ್ ರಾಜ್‌ಬನ್ಷಿ ಡಕ್‌ಔಟ್ ಹಾಗೂ ಕರಣ್ ಕೆಸಿ ಅಜೇಯ 18 ರನ್ ಕಲೆಹಾಕಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಟಲಿ ಪರ ಕ್ರಿಶನ್ ಕಲುಗಮಗೆ ಮೂರು ವಿಕೆಟ್, ಬೆನ್ ಮನೆಟಿ ಎರಡು ವಿಕೆಟ್, ಅಲಿಹಸನ್, ಜೆಜೆ ಸ್ಮಟ್ಸ್ ಹಾಗೂ ಜಸ್‌ಪ್ರೀತ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

ಇಟಲಿ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಹೋದರರಾದ ಜಸ್ಟಿನ್ ಮೋಸ್ಕಾ ಹಾಗೂ ಆಂಥೋನಿ ಮೋಸ್ಕಾ ವಿಕೆಟ್ ಒಪ್ಪಿಸದೇ ತಂಡವನ್ನು ಬೇಗನೆ ಗೆಲುವಿನ ದಡ ಸೇರಿಸಿದರು. ಜಸ್ಟಿನ್ ಮೋಸ್ಕಾ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 60 ರನ್ ಬಾರಿಸಿದರೆ, ಆಂಥೋನಿ ಮೋಸ್ಕಾ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 62 ರನ್ ಬಾರಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular