ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಟೂರ್ನಿ ಗ್ರೂಪ್ ಹಂತದ 36ನೇ ಪಂದ್ಯ ಇಂದು ( ಫೆಬ್ರವರಿ 18 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎ ಗುಂಪಿನ ಭಾರತ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇದು ಭಾರತದ ಪಾಲಿನ ಗ್ರೂಪ್ ಹಂತದ ಕೊನೆಯ ಪಂದ್ಯವಾಗಿದ್ದು, ಈ ಪಂದ್ಯದ ಫಲಿತಾಂಶ ಏನೇ ಬಂದರೂ ಈಗಾಗಲೇ ಸೂಪರ್ 8 ಪ್ರವೇಶ ಮಾಡಿರುವ ಭಾರತದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.
ಹೀಗಾಗಿ ಈ ಪಂದ್ಯ ಭಾರತದ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಇನ್ನು ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಕಾರಣದಿಂದಾಗಿ ಭಾರತದ ನೇರಪ್ರಸಾರದ ಚಾನೆಲ್ ಹಾಗು ಒಟಿಟಿ ವೇದಿಕೆಗಳು ಈ ಬಾರಿಯ ಟೂರ್ನಿಯಲ್ಲಿ ಭಾರತ 300+ ರನ್ ಬಾರಿಸಲಿದೆ ಎಂದು ಹೈಪ್ ಕೊಡುತ್ತಲೇ ಬಂದಿವೆ. ಹೀಗಾಗಿ ಈ ಪಂದ್ಯದಲ್ಲೇನಾದರೂ ಭಾರತ ಮೊದಲು ಬ್ಯಾಟಿಂಗ್ ಮಾಡಿದರೆ 300+ ರನ್ ಬಾರಿಸಬಹುದಾ ಎಂಬುದನ್ನು ಕಾದು ನೋಡಬೇಕಿದೆ.
ಭಾರತದ ಸೂಪರ್ 8 ಪಂದ್ಯಗಳ ವೇಳಾಪಟ್ಟಿ
vs ದಕ್ಷಿಣ ಆಫ್ರಿಕಾ – ಫೆಬ್ರವರಿ 22, 2026 – ಸಂಜೆ 7ಕ್ಕೆ, ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್
vs ಜಿಂಬಾಬ್ವೆ – ಫೆಬ್ರವರಿ 26, 2026 – ಸಂಜೆ 7ಕ್ಕೆ , ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ
vs ವೆಸ್ಟ್ ಇಂಡೀಸ್ – ಮಾರ್ಚ್ 1, 2026 – ಸಂಜೆ 7ಕ್ಕೆ, ಈಡನ್ ಗಾರ್ಡನ್ಸ್ ಕ್ರೀಡಾಂಗಣ, ಕೊಲ್ಕತ್ತಾ

