HomeLatest NewsT20 World Cup 2026: ಸ್ಕೋರ್‌ಕಾರ್ಡ್ ಅಲ್ಲ ಮೊಬೈಲ್ ನಂಬರ್; ಲಂಕಾ ವಿರುದ್ಧ ಪರದಾಡಿದ ಇಂಗ್ಲೆಂಡ್...

T20 World Cup 2026: ಸ್ಕೋರ್‌ಕಾರ್ಡ್ ಅಲ್ಲ ಮೊಬೈಲ್ ನಂಬರ್; ಲಂಕಾ ವಿರುದ್ಧ ಪರದಾಡಿದ ಇಂಗ್ಲೆಂಡ್ ಮಾನ ಉಳಿಸಿದ ಸಾಲ್ಟ್

ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ.

ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಅದರಂತೆ ಇಂಗ್ಲೆಂಡ್ ಶ್ರೀಲಂಕಾ ಬೌಲಿಂಗ್ ದಾಳಿಗೆ ಪರದಾಡಿದ್ದು, 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿ ಶ್ರೀಲಂಕಾಗೆ ಗೆಲ್ಲಲು 147 ರನ್‌ಗಳ ಸುಲಭ ಗುರಿಯನ್ನು ನೀಡಿದೆ.

ಲಂಕಾ ಬೌಲಿಂಗ್ ದಾಳಿಗೆ ನಾಲ್ಕನೇ ಓವರ್‌ನಲ್ಲೇ ತನ್ನ ಮೊದಲ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಾಲು ಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಹೀಗೆ ಇಡೀ ತಂಡ ಲಂಕಾ ಎದುರು ಮಂಕಾದರೆ ಮತ್ತೊಂದೆಡೆ ಫಿಲ್ ಸಾಲ್ಟ್ 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 62 ರನ್ ಬಾರಿಸಿ ತಂಡ ಅಲ್ಪಮೊತ್ತಕ್ಕೆ ಕುಸಿದು ಮುಖಭಂಗಕ್ಕೊಳಗಾಗುವುದನ್ನು ತಪ್ಪಿಸಿದರು. ಸಾಲ್ಟ್ ಹೊರತುಪಡಿಸಿದರೆ ಇಂಗ್ಲೆಂಡ್‌ನ ಇನ್ಯಾವ ಆಟಗಾರನೂ ಸಹ ಲಂಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೋಸ್ ಬಟ್ಲರ್ 7 ರನ್ ಗಳಿಸಿದರೆ, ಜೇಕಬ್ ಬೆಥೆಲ್ 3, ಟಾಮ್ ಬ್ಯಾಂಟನ್ 6, ನಾಯಕ ಹ್ಯಾರಿ ಬ್ರೂಕ್ 14, ಸ್ಯಾಮ್ ಕರನ್ 11, ವಿಲ್ ಜ್ಯಾಕ್ಸ್ 21, ಲಿಯಾಮ್ ಡಾಸನ್ 6, ಜೋಫ್ರಾ ಆರ್ಚರ್ ಡಕ್‌ಔಟ್, ಆದಿಲ್ ರಶೀದ್ ಅಜೇಯ 1 ರನ್ ಹಾಗೂ ಜೇಮಿ ಓವರ್ಟನ್ ಅಜೇಯ 10 ರನ್ ದಾಖಲಿಸಿದರು.

ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ ಮೂರು ವಿಕೆಟ್, ದಿಲ್ಶನ್ ಮಧುಶಂಕ ಹಾಗೂ ಮಹೀಶ್ ತೀಕ್ಷಣ ತಲಾ ಎರಡು ವಿಕೆಟ್ ಪಡೆದರೆ, ದುಷ್ಮಂತ ಚಮೀರ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular