HomeLatest NewsT20 World Cup 2026: 2 ಪಂದ್ಯಗಳಲ್ಲಿ ಹೀನಾಯ ಸೋಲುಂಡ ಆಸ್ಟ್ರೇಲಿಯಾ ಸೂಪರ್ 8 ತಲುಪಲು...

T20 World Cup 2026: 2 ಪಂದ್ಯಗಳಲ್ಲಿ ಹೀನಾಯ ಸೋಲುಂಡ ಆಸ್ಟ್ರೇಲಿಯಾ ಸೂಪರ್ 8 ತಲುಪಲು ಇರುವುದು ಇದೊಂದೇ ದಾರಿ!

ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಗ್ರೂಪ್ ಹಂತದಿಂದಲೇ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ.

ಟೂರ್ನಿಯಲ್ಲಿ ಬಿ ಗುಂಪಿನಲ್ಲಿದ್ದ ಆಸ್ಟ್ರೇಲಿಯಾ ಐರ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿತ್ತು. ಬಳಿಕ ಕ್ರಿಕೆಟ್ ಶಿಶು ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋತು ಭಾರೀ ಮುಖಭಂಗ ಅನುಭವಿಸಿತು.

ಹೀಗೆ ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿದ್ದ ಆಸ್ಟ್ರೇಲಿಯಾ ಸೂಪರ್ 8 ಸುತ್ತಿಗೆ ಪ್ರವೇಶಿಸಬೇಕೆಂದರೆ ನಂತರದ ಎರಡು ಪಂದ್ಯಗಳಲ್ಲಿ ಕಡ್ಡಾಯವಾಗಿ ಗೆಲ್ಲಬೇಕಿತ್ತು. ಹೀಗಿದ್ದಾಗ ಮಾತ್ರ ಯಾವ ತಂಡದ ಮೇಲೂ ಅವಲಂಬಿತವಾಗದೇ ಸೂಪರ್ 8 ತಲುಪಲು ಅರ್ಹತೆ ಗಿಟ್ಟಿಸಿಕೊಳ್ಳುತ್ತಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ನಿನ್ನೆ ( ಫೆಬ್ರವರಿ 16 ) ಪಲ್ಲೆಕೆಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲುಂಡ ಆಸ್ಟ್ರೇಲಿಯಾ ಆಡಿದ ಮೂರರಲ್ಲಿ ಎರಡರಲ್ಲಿ ಸೋಲನ್ನೇ ಕಂಡಿದ್ದು, ಇದೀಗ ಸೂಪರ್ 8 ಪ್ರವೇಶಿಸಬೇಕೆಂದರೆ ಅನ್ಯ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಹೌದು, ಬಿ ಗುಂಪಿನ ಆಸ್ಟ್ರೇಲಿಯಾ ಸೂಪರ್ 8 ಪ್ರವೇಶಿಸಬೇಕೆಂದರೆ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಜಿಂಬಾಬ್ವೆಗೆ ಉಳಿದಿರುವ ಎರಡೂ ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಬೇಕಿದೆ. ಅಲ್ಲದೇ ಒಮನ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಬೇಕಿದೆ. ಹೀಗೆ ನಡೆದರೆ ಮಾತ್ರ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ಸರಿಸಮನಾಗಿ 4 ಅಂಕಗಳನ್ನು ಹೊಂದಲಿವೆ. ಅಲ್ಲದೇ ಆಸ್ಟ್ರೇಲಿಯಾ ಜಿಂಬಾಬ್ವೆಗಿಂತ ಹೆಚ್ಚಿನ ನೆಟ್‌ ರನ್‌ರೇಟ್ ಪಡೆದುಕೊಳ್ಳಬೇಕಿದೆ. ಇಷ್ಟು ನಡೆದರೆ ಮಾತ್ರ ಆಸ್ಟ್ರೇಲಿಯಾ ಸೂಪರ್ 8 ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿದೆ.

ಒಂದುವೇಳೆ ಜಿಂಬಾಬ್ವೆ ಉಳಿದ ತನ್ನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರೂ 6 ಅಂಕಗಳನ್ನು ಪಡೆದುಕೊಳ್ಳಲಿದ್ದು, ಬಿ ಗುಂಪಿನಿಂದ ಸೂಪರ್ 8 ಪ್ರವೇಶಿಸಲಿದೆ.

ಜಿಂಬಾಬ್ವೆ ಮುಂದಿನ ಪಂದ್ಯಗಳು

ಜಿಂಬಾಬ್ವೆ vs ಐರ್ಲೆಂಡ್ – ಫೆಬ್ರವರಿ 17, 2026 – ಪಲ್ಲೆಕೆಲೆ ಕ್ರೀಡಾಂಗಣ

ಜಿಂಬಾಬ್ವೆ vs ಶ್ರೀಲಂಕಾ – ಫೆಬ್ರವರಿ 19, 2026 – ಕೊಲಂಬೊ ಕ್ರೀಡಾಂಗಣ

ಆಸ್ಟ್ರೇಲಿಯಾ ಮುಂದಿನ ಪಂದ್ಯ

ಆಸ್ಟ್ರೇಲಿಯಾ vs ಒಮನ್ – ಫೆಬ್ರವರಿ 20, 2026 – ಪಲ್ಲೆಕೆಲೆ ಕ್ರೀಡಾಂಗಣ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular