HomeIndiaತ್ರಿಷಾ ಬಗ್ಗೆ ಹೇಳಿಕೆ: ಕ್ಷಮೆ ಕೇಳಿದ ತಮಿಳುನಾಡು ಬಿಜೆಪಿ ಅಧ್ಯಕ್ಷ!

ತ್ರಿಷಾ ಬಗ್ಗೆ ಹೇಳಿಕೆ: ಕ್ಷಮೆ ಕೇಳಿದ ತಮಿಳುನಾಡು ಬಿಜೆಪಿ ಅಧ್ಯಕ್ಷ!

ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಸಂದರ್ಭದಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ನೀಡಿದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ನಟಿ ತ್ರಿಷಾ ಕುರಿತು ಅವರು ನೀಡಿದ್ದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೇಳಿದ್ದಾರೆ.

ನಟ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಟೀಕಿಸುವ ಭರದಲ್ಲಿ ನೈನಾರ್ ನಾಗೇಂದ್ರನ್ ನಟಿ ತ್ರಿಷಾ ವಿರುದ್ಧ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಈಗ ಅವರು ಕ್ಷಮೆಯಾಚಿಸಿದ್ದಾರೆ.

ನಟ ವಿಜಯ್ ಸಮಾವೇಶದಲ್ಲಿ ತಮಿಳುನಾಡಿನಲ್ಲಿ ಡಿಎಂಕೆಗೆ ತಾವೊಬ್ಬರೇ ಎದುರಾಳಿ, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ನೈನಾರ್ ನಾಗೇಂದ್ರನ್ ನಟಿ ತ್ರಿಷಾ ಹೆಸರು ಎಳೆದು ತಂದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನಟ ವಿಜಯ್‌ಗೆ ಅನುಭವದ ಕೊರತೆ ಇದೆ. ಅವರು ಮೊದಲು ನಟಿ ತ್ರಿಷಾ ಮನೆಯಿಂದ ಹೊರಬಂದು ತಳಮಟ್ಟದ ಸಮಸ್ಯೆಗಳನ್ನು ಅರಿಯಲಿ. ಜನರ ಸಮಸ್ಯೆಗಳನ್ನು ಕೇಳಲಿ” ಎಂದು ಟೀಕಿಸಿದ್ದರು.

ಕ್ಷಮೆ ಕೇಳಿದ ಬಿಜೆಪಿ ಅಧ್ಯಕ್ಷರು: ಈಗ ನೈನಾರ್ ನಾಗೇಂದ್ರನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರು, “ಈ ಹೇಳಿಕೆಯನ್ನು ತಪ್ಪಿನಿಂದ ನೀಡಲಾಗಿದೆ” ಎಂದು ಹೇಳಿದ್ದಾರೆ.

“ಇದು ತಪ್ಪಿನಿಂದ ನೀಡಲಾದ ಹೇಳಿಕೆಯಾಗಿದೆ. ನಮ್ಮ ಅಖಿಲ ಭಾರತ ಮಹಿಳಾ ಘಟಕದ ಅಧ್ಯಕ್ಷರಾದ ವನತಿ ಶ್ರೀನಿವಾಸನ್ ಮತ್ತು ಅಣ್ಣಾಮಲೈ ಅವರು ಈ ವಿಷಯದ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಅದಕ್ಕಾಗಿ ನಾನು ವಿಷಾದವನ್ನು ವ್ಯಕ್ತಪಡಿಸುತ್ತೇನೆ” ಎಂದು ತಿಳಿಸಿದ್ದಾರೆ.

ನಟ ವಿಜಯ್ ಹೇಳಿಕೆಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ನಾಗೇಂದ್ರನ್, “ರಾಜಕೀಯದಲ್ಲಿ ಅನುಭವ ಪಡೆಯಲು ಮತ್ತು ಯಶಸ್ವಿಯಾಗಲು ವಿಜಯ್ ಅವರು ತ್ರಿಷಾ ಅವರ ಮನೆಯಿಂದ ಹೊರಬರಬೇಕು” ಎಂದು ಹೇಳಿದದರು. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ನಟಿ ತ್ರಿಷಾ ಈ ಹೇಳಿಕೆಯನ್ನು ತಮ್ಮ ಕಾನೂನು ಸಲಹೆಗಾರರ ಮೂಲಕ ಖಂಡಿಸಿದ್ದರು. ತಾವು ರಾಜಕೀಯವಾಗಿ ತಟಸ್ಥರಾಗಿದ್ದೇವೆ. ರಾಜ್ಯ ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರಿಂದ ಇಂತಹ ಅಸಹ್ಯಕರ ಮತ್ತು ಅನುಚಿತವಾದ ಹೇಳಿಕೆ ಬರುತ್ತದೆ ಎಂದು ನನ್ನ ಕಕ್ಷಿದಾರರು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.

ತಮ್ಮನ್ನು ಕೇವಲ ತಮ್ಮ ಕೆಲಸದ ಮೂಲಕ ಗುರುತಿಸಬೇಕು ಮತ್ತು ತಮಗೆ ಸಂಬಂಧವಿಲ್ಲದ ವಿಷಯಗಳಲ್ಲಿ ತಮ್ಮ ಹೆಸರನ್ನು ಎಳೆದು ತರಬಾರದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು.

ಈ ಹೇಳಿಕೆ ಹಲವಾರು ರಾಜಕೀಯ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆಡಳಿತ ಪಕ್ಷ ಡಿಎಂಕೆ ನಾಯಕರು, ಇಂತಹ ಹೇಳಿಕೆಗಳು ಮಹಿಳೆಯರ ಬಗ್ಗೆ ಗೌರವ ಇಲ್ಲದಿರುವುದನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿತ್ತು. ಕಾಂಗ್ರೆಸ್ ಸಹ ರಾಜಕೀಯ ಚರ್ಚೆಗಳಲ್ಲಿ ನಟಿಯ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಹೇಳಿತ್ತು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular