ಇತ್ತೀಚಿನ ದಿನಗಳಲ್ಲಿ ಕ್ಯಾಬ್ ಚಾಲಕರು ವಿಲಕ್ಷಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಹಕರು ಕಾರು ಹತ್ತಿದ ತಕ್ಷಣ ರೈಡ್ ಕ್ಯಾನ್ಸಲ್ ಮಾಡಲು ಹೇಳುವುದು ಒಂದು ಕಡೆಯಾದರೆ, ಇತ್ತೀಚೆಗೆ ಕ್ಯಾಬ್ ಚಾಲಕರೊಬ್ಬರು ಹಂಚಿಕೊಂಡ ಸ್ಕ್ರೀನ್ಶಾಟ್ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಒಬ್ಬ ಕ್ಯಾಬ್ ಚಾಲಕ ತನಗಾದ ಕಹಿ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾನೆ. ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲವಾದರೂ, ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಜೋಡಿ ಮಾಡಿದ ಕೆಲಸ ಚಾಲಕನನ್ನು ಮುಜುಗರಕ್ಕೀಡು ಮಾಡಿದೆ. ಚಲಿಸುವ ಕಾರನ್ನೇ ‘ಓಯೋ’ ರೂಮ್ ಅಂದುಕೊಂಡ ಈ ಜೋಡಿ ಅಸಭ್ಯವಾಗಿ ವರ್ತಿಸಿದ್ದಾರೆ. “ಚುಂಬನದಿಂದ (Kiss) ಶುರುವಾದ ಇವರ ರೋಮಾನ್ಸ್ ಅತಿರೇಕದ ಮಟ್ಟಕ್ಕೆ (Intimate level) ತಲುಪಿತ್ತು” ಎಂದು ಚಾಲಕ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾನೆ. ಇಂತಹ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ಆದರೆ, ಈ ವಿಡಿಯೋಗಳು ಅಸಲಿಯೇ ಅಥವಾ ಕೇವಲ ‘ರೀಲ್ಸ್’ಗಾಗಿ ಸೃಷ್ಟಿಸಿದ್ದೇ ಎಂಬ ಬಗ್ಗೆ ಗೊಂದಲವಿದೆ.
ಗ್ರಾಹಕಿಯಿಂದ ಸೆ*ಕ್ಸ್ ಆಫರ್! ಇನ್ನು ಕೆಲವು ದಿನಗಳ ಹಿಂದೆ ದೆಹಲಿಯ ಚಾಲಕನೊಬ್ಬನಿಗೆ ವಿಚಿತ್ರ ಅನುಭವವಾಗಿತ್ತು. ಇಸ್ಕಾನ್ ದೇವಸ್ಥಾನಕ್ಕೆ ಹೋಗಲು ರೈಡ್ ಬುಕ್ ಮಾಡಿದ್ದ ಮಹಿಳೆಯೊಬ್ಬರು, ಮೊದಲು ಆ್ಯಪ್ ಮೂಲಕ ‘ಹಲೋ ಬ್ರೋ’ ಎಂದು ಮೆಸೇಜ್ ಮಾಡಿದ್ದರು. ಚಾಲಕ ‘ಹಾಯ್’ ಎಂದಾಗ, ಆಕೆ ನೇರವಾಗಿ “ಬ್ರೋ, ಸೆ*ಕ್ಸ್ ಮಾಡ್ತೀರಾ?” ಎಂದು ಕೇಳಿದ್ದಲ್ಲದೆ ವಾಟ್ಸಾಪ್ ನಂಬರ್ ಕೂಡ ಕೇಳಿದ್ದಳು. ಇದರಿಂದ ಬೆಚ್ಚಿಬಿದ್ದ ಚಾಲಕ ಆಫರ್ ತಿರಸ್ಕರಿಸಿದ ತಕ್ಷಣ ಆಕೆ ರೈಡ್ ಕ್ಯಾನ್ಸಲ್ ಮಾಡಿದ್ದಳು.
ಸಂಸ್ಕೃತಿ ಮರೆಯುತ್ತಿರುವ ಯುವಜನಾಂಗ? ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ ವಲಸೆ ಬರುವ ಯುವಜನತೆ ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ತಾವು ಎಲ್ಲಿದ್ದೇವೆ, ಅಲ್ಲಿನ ಸಂಸ್ಕೃತಿ ಮತ್ತು ಜನರ ಗೌರವದ ಅರಿವಿಲ್ಲದೆ ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ.
ಬೆಂಗಳೂರಿನಂತಹ ನಗರಗಳಲ್ಲಿ ಭಾಷಾ ಸಮಸ್ಯೆಯ ನಡುವೆಯೂ ಜನರು ಕ್ಯಾಬ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುವುದು ಅಥವಾ ಸಾರ್ವಜನಿಕವಾಗಿ ಇಂತಹ ಅಶ್ಲೀಲ ಕೃತ್ಯಗಳಲ್ಲಿ ತೊಡಗುವುದು ಯಾರಿಗಾದರೂ ಮುಜುಗುರ ಉಂಟುಮಾಡುವ ವಿಷಯವಾಗಿದೆ. ಇಂತಹ ಘಟನೆಗಳ ವಿಡಿಯೋಗಳು ಮುಂದೆಯೂ ಹರಿದಾಡುವುದರಲ್ಲಿ ಸಂಶಯವಿಲ್ಲ.

