HomeLatest NewsT20 World Cup 2026: ಸವಾಲಿನ ಗುರಿ ನೀಡಿ ಆಸ್ಟ್ರೇಲಿಯಾಗೆ ಶಾಕ್ ಕೊಟ್ಟ ಜಿಂಬಾಬ್ವೆ

T20 World Cup 2026: ಸವಾಲಿನ ಗುರಿ ನೀಡಿ ಆಸ್ಟ್ರೇಲಿಯಾಗೆ ಶಾಕ್ ಕೊಟ್ಟ ಜಿಂಬಾಬ್ವೆ

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 19ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆರಿಸಿಕೊಂಡು ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಜಿಂಬಾಬ್ವೆ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ 170 ರನ್‌ಗಳ ಸವಾಲಿನ ಗುರಿ ನೀಡಿದೆ.

ಇನ್ನು ಟಾಸ್ ಗೆದ್ದ ಆಸ್ಟ್ರೇಲಿಯಾ ಜಿಂಬಾಬ್ವೆ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ವಿಕೆಟ್ ಕಬಳಿಸುವ ಯೋಜನೆಯಲ್ಲಿ ಫೀಲ್ಡಿಂಗ್ ಆರಿಸಿಕೊಂಡಿತ್ತು. ಆದರೆ ಆಸ್ಟ್ರೇಲಿಯಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಜಿಂಬಾಬ್ವೆ ಕೇವಲ ಎರಡು ವಿಕೆಟ್ ಕಳೆದುಕೊಂಡು ಒಳ್ಳೆಯ ಮೊತ್ತವನ್ನು ಕಲೆಹಾಕುವ ಮೂಲಕ ಶಾಕ್ ಕೊಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಂಬಾಬ್ವೆ ಪರ ಆರಂಭಿಕರಾಗಿ ಕಣಕ್ಕಿಳಿದ ಬ್ರಿಯಾನ್ ಬೆನೆಟ್ ಹಾಗೂ ತಡಿವಾನಶೆ ಮಾರುಮಾನಿ 61 ರನ್‌ಗಳ ಜತೆಯಾಟವನ್ನಾಡುವ ಮೂಲಕ ಒಳ್ಳೆಯ ಆರಂಭ ತಂದುಕೊಟ್ಟರು. ತಡಿವಾನಶೆ ಮಾರುಮಾನಿ 21 ಎಸೆತಗಳಲ್ಲಿ 7 ಬೌಂಡರಿ ಸಹಿತ 35 ರನ್ ಕಲೆಹಾಕಿದರೆ, ಕೊನೆಯವರೆಗೂ ಕಣದಲ್ಲಿದ್ದ ಬ್ರಿಯಾನ್ ಬೆನೆಟ್ 56 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು. ಇನ್ನುಳಿದಂತೆ ರಯಾನ್ ಬರ್ಲ್ 30 ಎಸೆತಕ್ಕೆ 35 ರನ್ ಹಾಗೂ ನಾಯಕ ಸಿಕಂದರ್ ರಾಜಾ 13 ಎಸೆತಗಳಲ್ಲಿ ಅಜೇಯ 25 ರನ್ ಬಾರಿಸಿದರು.

ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟೊಯಿನಿಸ್ ಹಾಗೂ ಕ್ಯಾಮೆರಾನ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular