ಬೆಂಗಳೂರು: ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮಾತ್ರ ದಿನೇ ದಿನೇ ಕುಸಿಯುತ್ತಲೇ ಸಾಗಿವೆ. ಕಳೆದ ವಾರವಿಡೀ ಇಳಿಕೆಯ ಹಾದಿಯಲ್ಲಿದ್ದ ಅಮೂಲ್ಯ ಲೋಹಗಳ ಬೆಲೆ, ಈ ವಾರದ ಆರಂಭದ ದಿನವಾದ ಇಂದು ಕೂಡ ದಿಢೀರ್ ಕುಸಿತ ಕಂಡು ಆಭರಣ ಖರೀದಿದಾರರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಬೆಂಗಳೂರಿನಲ್ಲಿ ಇಂದಿನ ಸ್ಥಿತಿ:
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ದರ ಗಣನೀಯವಾಗಿ ಇಳಿಕೆಯಾಗಿದೆ. ಯುದ್ಧದಂತಹ ತುರ್ತು ಸಂದರ್ಭಗಳಲ್ಲಿ ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಬೆಲೆ ಏರಬೇಕಿತ್ತು. ಆದರೆ, ಪ್ರಸಕ್ತ ವಿದ್ಯಮಾನದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ.
ಬೆಲೆ ಇಳಿಕೆಗೆ ಕಾರಣವೇನು?
ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಟ್ಟದ ಉದ್ವಿಗ್ನತೆಯ ವೇಳೆ ಚಿನ್ನದ ಬೆಲೆ ಏರಿಕೆ ಕಾಣುವುದು ವಾಡಿಕೆ. ಆದರೆ, ಫೆಬ್ರವರಿ 28ರಂದು ಇರಾನ್-ಇಸ್ರೇಲ್ ಯುದ್ಧ ಆರಂಭವಾದ ಮೊದಲ 2-3 ದಿನಗಳನ್ನು ಹೊರತುಪಡಿಸಿದರೆ, ಉಳಿದ ದಿನಗಳಲ್ಲಿ ಬೆಲೆ ಸತತವಾಗಿ ಇಳಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕನ್ ಡಾಲರ್ ಮೌಲ್ಯವು ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಬಲಗೊಳ್ಳುತ್ತಿರುವುದು. ಡಾಲರ್ ಪ್ರಬಲವಾದಷ್ಟೂ ಹೂಡಿಕೆದಾರರು ಚಿನ್ನದಿಂದ ಹಿಂದೆ ಸರಿಯುತ್ತಿರುವುದು ಬೆಲೆ ಕುಸಿತಕ್ಕೆ ದಾರಿಯಾಗಿದೆ.
1 ಗ್ರಾಂ ಚಿನ್ನ:ಇಂದಿನ ಬೆಲೆ: ₹15,917
8 ಗ್ರಾಂ ಚಿನ್ನ :ಇಂದಿನ ಬೆಲೆ: ₹1,27,336
10 ಗ್ರಾಂ ಚಿನ್ನ :ಇಂದಿನ ಬೆಲೆ: ₹1,59,170
100 ಗ್ರಾಂ ಚಿನ್ನ:ಇಂದಿನ ಬೆಲೆ: ₹15,91,700
ಭಾರತದ ವಿವಿಧ ನಗರಗಳಲ್ಲಿ 24K ಚಿನ್ನದ ಬೆಲೆ (1 ಗ್ರಾಂ):
ಚೆನ್ನೈ: ರೂ. 16,101
ಮುಂಬೈ: ರೂ. 15,917
ದೆಹಲಿ: ರೂ. 15,930
ಕೋಲ್ಕತ್ತಾ: ರೂ. 15,917
ಬೆಂಗಳೂರು: ರೂ. 15,917
ಹೈದರಾಬಾದ್: ರೂ. 15,917
ಕೇರಳ: ರೂ. 15,917
ಪುಣೆ: ರೂ. 15,917
ವಡೋದರಾ: ರೂ. 15,920
ಅಹಮದಾಬಾದ್: ರೂ. 15,920
ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ ವಿವರ
1 ಗ್ರಾಂ ಬೆಳ್ಳಿ:ಇಂದಿನ ಬೆಲೆ: ₹270
100 ಗ್ರಾಂ ಬೆಳ್ಳಿ:ಇಂದಿನ ಬೆಲೆ: ₹27,000
1 ಕೆಜಿ (1000 ಗ್ರಾಂ) ಬೆಳ್ಳಿ:ಇಂದಿನ ಬೆಲೆ: ₹2,70,000

