ಬೇಸಿಗೆ ಆರಂಭವಾಗಿದೆ ಕುಡಿಯುವ ನೀರಿಗಾಗಿ, ಬೆಳೆಗಳಿಗೆ ನೀರು ಹಾಯಿಸಲು ರೈತರು ಬೋರ್ವೆಲ್ ಕೊರೆಸಲು ಪ್ರಾರಂಭಿಸುತ್ತಾರೆ. ಆದರೆ ಬೋರ್ವೆಲ್ ಕೊರೆಯಲು ನಿಯಮಗಳಿವೆ. ಅವುಗಳನ್ನು ಪಾಲನೆ ಮಾಡಬೇಕಿದೆ.
ಜಿಲ್ಲಾಡಳಿತ ಈ ವಿಚಾರದಲ್ಲಿ ಮೇಲ್ವಿಚಾರಣೆ ಮಾಡುತ್ತದೆ. ಜಿಲ್ಲೆಯ ಎಲ್ಲಾ ಕೊಳವೆ ಬಾವಿ ಕೊರೆಯುವ ಮಾಲೀಕರು ಕೊಳವೆಬಾವಿಗಳನ್ನು ಕೊರೆಸುವಾಗ ನಿಬಂಧನೆಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆಗಳನ್ನು ನೀಡಿದ್ದಾರೆ.
ಕೊಳವೆ ಬಾವಿ ಕೊರೆಯುವಾಗ ಎಲ್ಲಾ ಮಾಲೀಕರು ಕಡ್ಡಾಯವಾಗಿ 7ಎ ಪ್ರಮಾಣ ಪತ್ರವನ್ನು ಪಡೆಯಬೇಕು. ಕೊಳವೆ ಬಾವಿ ಕೊರೆಯುವಾಗ ರೈತರಿಗೆ ತೊಂದರೆಯಾಗದಂತೆ ಸರ್ಕಾರದ ಏಕರೂಪ ದರಪಟ್ಟಿಯಲ್ಲಿ ನಿಗದಿಪಡಿಸಿರುವ ದರಗಳನ್ನು ಪಡೆಯಬೇಕು. ಇದಕ್ಕಿಂತ ಹೆಚ್ಚು ಮೊತ್ತವನ್ನು ರೈತರಿಂದ ವಸೂಲಿ ಮಾಡಬಾರದು ಎಂದು ಎಚ್ಚರಿಸಲಾಗಿದೆ.
ಕೊಳವೆಬಾವಿ ಕೊರೆಯಲು ನಿಯಮಗಳು
- ಕೊಳವೆ ಬಾವಿ ಕೊರೆದ ನಂತರ ವಿಫಲವಾದರೆ ಅದನ್ನು ಸುರಕ್ಷಿತವಾಗಿ ಮುಚ್ಚಬೇಕು
- 5.0ಮೀ ಕೇಸಿಂಗ್ ಹಾಕಿ ಅದರ ಮುಚ್ಚಳ ಮುಚ್ಚವಂತೆ ಕ್ರಮ ವಹಿಸುವುದು
- 7ಎ ಪ್ರಮಾಣ ಪತ್ರವನ್ನು ಪಡೆಯದ ಮಾಲೀಕರ ಮೇಲೆ ಪೊಲೀಸರಿಂದ ಕ್ರಮ
- ಸರ್ಕಾರಿ ಕಾಮಗಾರಿಗಳಿಗೆ ಕಡ್ಡಾಯವಾಗಿ 7ಎ ಹೊಂದಿರುವವರಿಂದಲೇ ಕಾಮಗಾರಿ

