ಬೆಂಗಳೂರು: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆ ಇಂದು (ಫೆಬ್ರವರಿ 20, ಶುಕ್ರವಾರ) ಗಮನಾರ್ಹ ಇಳಿಕೆ ಕಂಡಿದೆ. ಹೂಡಿಕೆದಾರರಿಗೆ ಸುರಕ್ಷಿತ ತಾಣವೆಂದೇ ನಂಬಲಾಗಿರುವ ಚಿನ್ನದ ದರ ಕುಸಿದಿರುವುದು ಆಭರಣ ಪ್ರಿಯರಲ್ಲಿ ಸಂತಸ ತಂದಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ:
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (24 ಕ್ಯಾರೆಟ್):
ಇಂದು ಶುದ್ಧ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಸ್ವಲ್ಪ ಮಟ್ಟಿನ ರಿಲೀಫ್ ಸಿಕ್ಕಿದೆ.
1 ಗ್ರಾಂ: ರೂ. 15,617 (ನಿನ್ನೆ ರೂ. 15,649 ಇತ್ತು) – 32 ರೂ. ಇಳಿಕೆ
10 ಗ್ರಾಂ: ರೂ. 1,56,170 (ನಿನ್ನೆ ರೂ. 1,56,490 ಇತ್ತು) – 320 ರೂ. ಇಳಿಕೆ
100 ಗ್ರಾಂ: ರೂ. 15,61,700 (ನಿನ್ನೆ ರೂ. 15,64,900 ಇತ್ತು) – 3,200 ರೂ. ಇಳಿಕೆ
ಬೆಳ್ಳಿ ಬೆಲೆ ಹೇಗಿದೆ?
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ಬೆಲೆ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದೆ.
1 ಗ್ರಾಂ: ರೂ. 270
1 ಕಿಲೋಗ್ರಾಂ: ರೂ. 2,70,000
ಮಾರುಕಟ್ಟೆ ವಹಿವಾಟು ಹೇಗಿದೆ?
ಒಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದ್ದರೆ, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಏಪ್ರಿಲ್ ವಾಯಿದೆ ಚಿನ್ನದ ಬೆಲೆ 10 ಗ್ರಾಂಗೆ 517 ರೂ. ಏರಿಕೆಯಾಗಿ 1,55,336 ರೂ. ಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 3,215 ರೂ. ಏರಿಕೆಯಾಗಿ 2,44,608 ರೂ. ಗೆ ವಹಿವಾಟು ನಡೆಸುತ್ತಿದೆ.
ಭಾರತದಲ್ಲಿ 24K ಚಿನ್ನದ ಬೆಲೆ
| ಚಿನ್ನದ ಪ್ರಮಾಣ (24K) | ಇಂದಿನ ಬೆಲೆ (₹) | ನಿನ್ನೆಯ ಬೆಲೆ (₹) | ವ್ಯತ್ಯಾಸ (₹) |
|---|---|---|---|
| 1 ಗ್ರಾಂ | 15,617 | 15,649 | – 32 ಇಳಿಕೆ |
| 8 ಗ್ರಾಂ | 1,24,936 | 1,25,192 | – 256 ಇಳಿಕೆ |
| 10 ಗ್ರಾಂ | 1,56,170 | 1,56,490 | – 320 ಇಳಿಕೆ |
| 100 ಗ್ರಾಂ | 15,61,700 | 15,64,900 | – 3,200 ಇಳಿಕೆ |
ಭಾರತದ ಪ್ರಮುಖ ನಗರಗಳಲ್ಲಿ 24K ಚಿನ್ನದ ದರ (ಪ್ರತಿ 1 ಗ್ರಾಂಗೆ):
ನಗರ24K ಚಿನ್ನದ ಬೆಲೆ (₹)
ಚೆನ್ನೈ₹15,731
ದೆಹಲಿ₹15,632
ಅಹಮದಾಬಾದ್₹15,622
ವಡೋದರಾ₹15,622
ಬೆಂಗಳೂರು₹15,617
ಮುಂಬೈ₹15,617
ಕೋಲ್ಕತ್ತಾ₹15,617
ಹೈದರಾಬಾದ್₹15,617
ಕೇರಳ₹15,617
ಪುಣೆ₹15,617

