ಕೆಲವು ದಿನಗಳ ಹಿಂದೆ ಎಲಾನ್ ಮಸ್ಕ್ ಅವರ ಎಐ ಸ್ಟಾರ್ಟ್ಅಪ್ xAIಯ ಕಾರ್ಯ ವೈಖರಿ ಬಹಿರಂಗವಾದಾಗ ಸುಲೈಮಾನ್ ಖಾನ್ ಘೋರಿ ವೈರಲ್ ಆಗಿದ್ದರು. ಅವರು xAIಯ ತಾಂತ್ರಿಕ ತಂಡದ ಭಾಗವಾಗಿದ್ದರು. ಈಗ ಅವರು ರಾಜೀನಾಮೆ ನೀಡಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಸುಲೇಮಾನ್ ಖಾನ್ ಈಗ AI ಸ್ಟಾರ್ಟ್ಅಪ್‌ನಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. “ನಾನು xAI ಅನ್ನು ತೊರೆದಿದ್ದೇನೆ. ನನ್ನ ಮಾಜಿ ತಂಡ ಮತ್ತು ಸಹೋದ್ಯೋಗಿಗಳಿಗೆ ಪ್ರೀತಿಯನ್ನು ಹೊರತುಪಡಿಸಿ ಏನೂ ಇಲ್ಲ” ಎಂದು ಅವರು ಪೋಸ್ಟ್ ಹಾಕಿದ್ದು, ರಾಜೀನಾಮೆಗೆ ಯಾವುದೇ ಕಾರಣವನ್ನು ನೀಡಿಲ್ಲ.
ಯೂಟ್ಯೂಬ್ ಚಾನೆಲ್ ರಿಲೆಂಟ್ಲೆಸ್ನಲ್ಲಿ ಸುಲೇಮಾನ್ ಅವರ ಪಾಡ್ಕ್ಯಾಸ್ಟ್ ಅನ್ನು ಜನವರಿ 16ರಂದು ಅಪ್ಲೋಡ್ ಮಾಡಲಾಗಿತ್ತು. ರಾಜೀನಾಮೆ ಕುರಿತು ಅವರು ಪಾಡ್ಕ್ಯಾಸ್ಟ್ ಹೇಳಿದ್ದಾರೆಯೇ? ಎಂಬ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ.
ಪಾಡ್ಕ್ಯಾಸ್ಟ್ ಅವರು ತಮ್ಮ ಅಪಾರ ಅನುಭವದ ಬಗ್ಗೆ ಮಾತನಾಡಿದ್ದರು. ಎಲಾನ್ ಮಸ್ಕ್ ಮತ್ತು ಅವರ ಟೆಕ್ ಸಂಬಂಧದ ಬಗ್ಗೆ ಚರ್ಚಿಸಿದ್ದರು. ಅತ್ಯಂತ ಪ್ರಮುಖವಾಗಿ ಸೈಬರ್ ಟ್ರಕ್ ಬಗ್ಗೆ ಗಮನ ಸೆಳೆದಿದ್ದರು.
ಎಲಾನ್ ಮಸ್ಕ್ ಒಬ್ಬ ಎಕ್ಸ್ಎಐ ಉದ್ಯೋಗಿಗೆ 24 ಗಂಟೆಗಳ ಒಳಗೆ ಒಂದು ಕೆಲಸ ಪೂರ್ಣಗೊಳಿಸಿದ್ದಕ್ಕಾಗಿ ಉಚಿತವಾಗಿ ಟೆಸ್ಲಾ ಸೈಬರ್ ಟ್ರಕ್ ನೀಡಿದರು. 1 ಗಂಟೆ 11 ನಿಮಿಷಗಳ ಪಾಡ್ಕ್ಯಾಸ್ಟ್ ಈಗ ವೈರಲ್ ಆಗುತ್ತಿದೆ.
ಪಾಡ್ಕ್ಯಾಸ್ಟ್‌ನಲ್ಲಿ ಅವರು ಎಲಾನ್ ಮಸ್ಕ್ ಅವರ ಕಾರ್ಯ ವಿಧಾನ ಮತ್ತು ಸಿಬ್ಬಂದಿಯೊಂದಿಗಿನ ಅವರ ಸಂಬಂಧದ ಕುರಿತು ಮಾತನಾಡಿದ್ದರು. ಸುಲೇಮಾನ್ ಖಾನ್ ಮಸ್ಕ್ ತನ್ನ ಸಿಬ್ಬಂದಿಗಳು ಅಗತ್ಯವಿದ್ದರೆ ತನ್ನೊಂದಿಗೆ ಮುಕ್ತವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು ಎಂದು ಬಯಸುತ್ತಾರೆ ಎಂದು ಹೇಳಿದ್ದರು.
xAI ಸುಲೇಮಾನ್ ಖಾನ್ ರಾಜೀನಾಮೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಾಡ್ಕ್ಯಾಸ್ಟ್ ಪ್ರಸಾರವಾದ ಬಳಿಕ ರಾಜೀನಾಮೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅವರು ಕಂಪನಿಯ ಮಾರ್ಗಸೂಚಿಗಳ ವಿರುದ್ಧವಾಗಿ ಮಾತನಾಡಿದ್ದಾರೆಯೇ? ಎಂದು ಎಕ್ಸ್‌ನಲ್ಲಿ ಹಲವಾರು ಜನರು ಕಮೆಂಟ್ ಮಾಡಿದ್ದಾರೆ.
ಸುಲೇಮಾನ್ ಟೆಸ್ಲಾ ಆಪ್ಟಿಮಸ್ ಹ್ಯೂಮನಾಯ್ಡ್ ರೋಬೋಟ್ ಡಿಜಿಟಲ್ ಆವೃತ್ತಿಯ ಯೋಜನೆಗಳ ಬಗ್ಗೆ ಮಾತನಾಡಿದ್ದರು. “ಆಪ್ಟಿಮಸ್ನೊಂದಿಗೆ ನೀವು ಮನುಷ್ಯನು ಮಾಡಬಹುದಾದ ಯಾವುದೇ ದೈಹಿಕ ಕಾರ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ ಮತ್ತು ರೋಬೋಟ್‌ಗೆ ಅದನ್ನು ಸ್ವಯಂಚಾಲಿತವಾಗಿ ಮಾಡಲು ಅವಕಾಶ ನೀಡುತ್ತಿದ್ದೀರಿ” ಎಂದು ಹೇಳಿದ್ದರು.

