HomeKarnatakaಗರ್ಭಿಣಿ ಪತ್ನಿ, ಮಗು ಕೊಂದು ವ್ಯಕ್ತಿ ರೈಲಿಗೆ ತಲೆಕೊಟ್ಟ ಕೇಸ್: ಆತ್ಮಹತ್ಯೆಗೆ ಪ್ರಚೋದನೆಯಡಿ ತಾಯಿ, ತಂಗಿ...

ಗರ್ಭಿಣಿ ಪತ್ನಿ, ಮಗು ಕೊಂದು ವ್ಯಕ್ತಿ ರೈಲಿಗೆ ತಲೆಕೊಟ್ಟ ಕೇಸ್: ಆತ್ಮಹತ್ಯೆಗೆ ಪ್ರಚೋದನೆಯಡಿ ತಾಯಿ, ತಂಗಿ ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯ ಪಕ್ಷಿಕೆರೆಯಲ್ಲಿ ಗರ್ಭಿಣಿ ಪತ್ನಿ, ಮಗು ಕೊಂದು ರೈಲಿಗೆ ತಲೆ ಕೊಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿದೆ.

ಮೃತ ಕಾರ್ತಿಕ್ ಭಟ್ ತಾಯಿ ಶಾಮಲಾ ಭಟ್, ಸಹೋದರಿ ಕಣ್ಮಣಿ ಅವರನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕೌಟುಂಬಿಕ ಕಲಹದ ಬಗ್ಗೆ ಕಾರ್ತಿಕ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು. ತಂದೆ, ತಾಯಿ, ಸಹೋದರಿಯ ವಿರುದ್ಧ ಕಾರ್ತಿಕ್ ಭಟ್ ಆರೋಪ ಮಾಡಿದ್ದರು. ಇವರೇ ನಮ್ಮ ಸಂಸಾರ ಹಾಳು ಮಾಡಿದರೆಂದು ಕಾರ್ತಿಕ್ ಉಲ್ಲೇಖಿಸಿದ್ದರು. ಇಂತಹ ಅಪ್ಪ-ಅಮ್ಮ ಯಾರಿಗೂ ಸಿಗಬಾರದೆಂದು ಬರೆದಿದ್ದರು. ಅತ್ತೆ, ಮಾವ ನಮ್ಮ ಶವಸಂಸ್ಕಾರ ಮಾಡಬೇಕೆಂದು ಕಾರ್ತಿಕ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ತಿಕ್ ತಂದೆ, ತಾಯಿ, ಸೋದರಿ ವಿರುದ್ಧ ಪ್ರಿಯಾಂಕಾ ಪೋಷಕರು ದೂರು ನೀಡಿದ್ದರು. ಕಾರ್ತಿಕ್ ತನ್ನ ಪತ್ನಿ, ಮಗು ಕೊಲೆ ಮಾಡುವುದಕ್ಕೆ ಸಾಧ್ಯವಿಲ್ಲವೆಂದು ಹೇಳಿದ್ದರು. ಪ್ರಿಯಾಂಕಾ ಮತ್ತು ಮಗು ಕೊಲೆಯ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.

ಅತ್ತೆ, ಮಾವನ ಕಿರುಕುಳದಿಂದ ಈ ದುರಂತ ನಡೆದಿದೆ ಎಂದು ದೂರು ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಪ್ರಿಯಾಂಕಾ ಪೋಷಕರು ಮನವಿ ಮಾಡಿದ್ದರು. ಪಕ್ಷಿಕೆರೆ ಗ್ರಾಮದ ಮನೆಯಲ್ಲಿ ಪತ್ನಿ, ಮಗುವನ್ನು ಕೊಂದಿದ್ದ ಕಾರ್ತಿಕ್ ನಂತರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular