HomeLatest Newsಓದಲು ಬಿಡದೇ ಮನೆಯಲ್ಲಿ ಮದುವೆ ಮಾಡಿಸಿಬಿಡುತ್ತಾರೆಂಬ ಆತಂಕ: ಆತ್ಮಹತ್ಯೆಗೆ ಶರಣಾದ ಪಿಯು ವಿದ್ಯಾರ್ಥಿನಿ

ಓದಲು ಬಿಡದೇ ಮನೆಯಲ್ಲಿ ಮದುವೆ ಮಾಡಿಸಿಬಿಡುತ್ತಾರೆಂಬ ಆತಂಕ: ಆತ್ಮಹತ್ಯೆಗೆ ಶರಣಾದ ಪಿಯು ವಿದ್ಯಾರ್ಥಿನಿ

ಅನಂತಪುರಂ: ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕು ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಮಹದಾಸೆ ಹೊಂದೊದ್ದ ಯುವತಿಯಿಬ್ಬಳು, ಪೋಷಕರು ತನಗೆ ಮದುವೆ ಮಾಡಿಸಿಬಿಡುತ್ತಾರೆ ಎಂಬ ಆತಂಕದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಚನ್ನಾಗಿ ಓದುತ್ತ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಮನೆಯಲ್ಲಿ ಪೋಷಕರು ಮದುವೆ ಬಗ್ಗೆ ಮಾತನಾಡುತ್ತಿದ್ದ ಮಾತುಗಳನ್ನು ಕೇಳಿ ಭವಿಷ್ಯ ಮುಗಿದು ಹೋಯಿತು ಎಂದು ಆಘಾತಕ್ಕೊಳಗಾಗಿದ್ದಾಳೆ. ತಾನು ಓದಿ ಉದ್ಯೋಗ ಮಾಡುತ್ತೇನೆ ನಂತರ ಮದುವೆ ಬಗ್ಗೆ ಯೋಚಿಸಿ ಎಂದು ತಂದೆ-ತಾಯಿಗೆ ಹೇಳಿ ಒಪ್ಪಿಸುವ ಯತ್ನವನ್ನೂ ಮಾಡದೇ ವಿದ್ಯಾರ್ಥಿನಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗಾರ್ಲದಿನ್ನೆ ಮಂಡಲದ ಮರ್ತಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೂಪಕೀರ್ತನಾ (17) ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.

ರೂಪಕೀರ್ತನಾ ಇತ್ತೀಚೆಗಷ್ಟೇ ಪಿಯುಸಿ ಮೊದಲ ವರ್ಷ ಪರೀಕ್ಷೆ ಮುಗಿಸಿ, ಸದ್ಯ ಬೇಸಿಗೆ ರಜೆಯಲ್ಲಿದ್ದಳು. ಈ ವೇಳೆ ಪೋಷಕರು ಮನೆಯಲ್ಲಿ, ಮಗಳಿಗೆ ಯಾವುದಾದರೂ ಒಳ್ಳೆ ಸಂಬಂಧ ಬಂದರೆ ಮದುವೆ ಮಾಡೋಣ ಎಂದು ಚರ್ಚೆ ಮಾಡಿಕೊಳ್ಳುತ್ತಿದ್ದರು. ಈ ವಿಶಯ ಕೇಳಿ ರೂಪಕೀರ್ತನಾ ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ನನಗೆ ಈಗಲೇ ಮದುವೆ ಬೇಡ, ನಾನು ಓದಬೇಕು ಎಂದು ಹೇಳಿದ್ದಾಳೆ. ಆದರೆ ಪೋಷಕರು ಒಳ್ಳೆ ಸಂಬಂಧ ಬಂದರೆ ಮದುವೆ ಮಾಡುತ್ತೇವೆ ಎಂದಿದ್ದಾರೆ.

ಇದರಿಂದ ತೀವ್ರವಾಗಿ ಮನನೊಂದಿದ್ದ ರೂಪಕೀರ್ತನಾ, ತನ್ನ ವಿದ್ಯಾಭ್ಯಾಸದ ಕನಸು, ಓದಿ ಉದ್ಯೋಗ ಮಾಡಬೇಕೆಂಬ ಮಹದಾಸೆ ಎಲ್ಲವೂ ನುಚ್ಚು ನೂರಾಯಿತೆಂದು ಕಂಗಾಅಲಾಗಿದ್ದಾಳೆ. ಮನೆಯಲ್ಲಿ ಪೋಷಕರು ಮದುವೆ ಪ್ರಸ್ತಾಪ ಮಾಡಿದ್ದರಷ್ಟೇ ಇನ್ನೂ ಮದುವೆ ನಿಶ್ಚಯಿಸಿರಲಿಲ್ಲ. ಆದರೂ ಭಯಗೊಂಡ ರೂಪಕೀರ್ತನಾ, ಎಲ್ಲಿ ಪೋಷಕರು ತನಗೆ ಬಲವಂತವಾಗಿ ಮದುವೆ ಮಾಡಿಬಿಡುತ್ತಾರೋ ಎಂಬ ಭಯದಲ್ಲಿ ಬದುಕನೇ ಕೊನೆಗಾಣಿಸಿಕೊಂಡಿದ್ದಾಳೆ.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆರಂಭದಲ್ಲಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular