ಚಿಕ್ಕಬಳ್ಳಾಪುರ: ಸಂತಾನಾರಣ ಶಸ್ತ್ರಚಿಕಿತ್ಸೆ ವೇಳೆ ವೈದ್ಯೆಯ ಎಡವಟ್ಟಿನಿಂದಾಗಿ ಸಣ್ಣ ಕರುಳು ಕಟ್ ಆಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ತಾಲೂಕು ಆಸ್ಪತ್ರೆಯ ಮುಂದೆ ಬಾಣಂತಿ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲೂಕು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ವಾಣಿ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬಟ್ಲಹಳ್ಳಿ ನಿವಾಸಿ ಜಿ.ಎನ್.ನರ್ಮದಾ (24) ಮೃತ ಬಾಣಂತಿ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ನಿವಾಸಿ ನರ್ಮದಾ ಎರಡು ಮಕ್ಕಳಾದ ಬಳಿಕ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರು. ಶಸ್ತ್ರಚಿಕಿತ್ಸೆ ವೇಳೆ ಆಕಸ್ಮಿಕವಾಗಿ ಸಣ್ಣ ಕರಳು ಕಟ್ ಆಗಿರುವ ಆರೋಪ ಕೇಳಿಬಂದಿದೆ.
ಇದರಿಂದ ಇನ್ಫೆಕ್ಷನ್ ಆಗಿ ಅನಾರೋಗ್ಯದಿಂದ ನರ್ಮದಾ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನರ್ಮದಾ ಮೃತಪಟ್ಟಿದ್ದಾರೆ. ನರ್ಮದಾ ಸಾವಿಗೆ ಡಾ.ವಾಣಿ ರೆಡ್ಡಿಯೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದು, ಆಸ್ಪತ್ರೆಯ ಮುಂದೆ ಬಾಣಂತಿ ನರ್ಮದಾ ಶವವಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಆಸ್ಪತ್ತ್ರೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

