ದೇಶದಲ್ಲಿ ನಕಲಿ ವಿಶ್ವವಿದ್ಯಾಲಯಗಳ ಜಾಲವು ವೇಗವಾಗಿ ಹರಡುತ್ತಿದ್ದು, ಈ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಕಳೆದ ಎರಡು ವರ್ಷಗಳಲ್ಲಿ ಇಂತಹ ನಕಲಿ ಸಂಸ್ಥೆಗಳ ಸಂಖ್ಯೆ 20 ರಿಂದ 32ಕ್ಕೆ ಏರಿಕೆಯಾಗಿದ್ದು, ಇವು ದೇಶದ 12 ರಾಜ್ಯಗಳಲ್ಲಿ ಹರಡಿಕೊಂಡಿವೆ.
ಈ ಕುರಿತು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಿರುವ ಯುಜಿಸಿ, ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯದಂತೆ ಸೂಚಿಸಿದೆ.ರಾಷ್ಟ್ರ ರಾಜಧಾನಿ ದೆಹಲಿ 12 ನಕಲಿ ವಿಶ್ವವಿದ್ಯಾಲಯಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ (4) ಇದೆ.ಕರ್ನಾಟಕದಲ್ಲಿ ಎರಡು ಸಂಸ್ಥೆಗಳನ್ನು ನಕಲಿ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳಿಗೆ ಸಲಹೆ:
ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲು, ಅದು ಯುಜಿಸಿ ಮಾನ್ಯತೆ ಪಡೆದಿದೆಯೇ ಎಂಬುದನ್ನು ಯುಜಿಸಿಯ ಅಧಿಕೃತ ವೆಬ್ಸೈಟ್ ಮೂಲಕ ಖಚಿತಪಡಿಸಿಕೊಳ್ಳಿ. ನಕಲಿ ಸಂಸ್ಥೆಗಳ ಆಮಿಷಕ್ಕೆ ಒಳಗಾಗಿ ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.
32 ವಿಶ್ವವಿದ್ಯಾಲಯಗಳು ‘ನಕಲಿ
| ಕ್ರಮ ಸಂಖ್ಯೆ | ರಾಜ್ಯ | ವಿಶ್ವವಿದ್ಯಾಲಯದ ಹೆಸರು |
| 1 | ಆಂಧ್ರಪ್ರದೇಶ | ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಗುಂಟೂರು |
| 2 | ಆಂಧ್ರಪ್ರದೇಶ | ಬೈಬಲ್ ಓಪನ್ ಯೂನಿವರ್ಸಿಟಿ ಆಫ್ ಇಂಡಿಯಾ, ವಿಶಾಖಪಟ್ಟಣಂ |
| 3 | ಅರುಣಾಚಲ ಪ್ರದೇಶ | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ |
| 4 | ದೆಹಲಿ | ವರ್ಲ್ಡ್ ಪೀಸ್ ಆಫ್ ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ (WPUNU) ಪಿತಾಂಪುರ |
| 5 | ದೆಹಲಿ | ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಇಂಜಿನಿಯರಿಂಗ್, ಕೋಟ್ಲಾ ಮುಬಾರಕ್ಪುರ |
| 6 | ದೆಹಲಿ | ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ & ಫಿಸಿಕಲ್ ಹೆಲ್ತ್ ಸೈನ್ಸಸ್ (AIIPHS) ಅಲಿಪುರ |
| 7 | ದೆಹಲಿ | ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ದರಿಯಾಗಂಜ್ |
| 8 | ದೆಹಲಿ | ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ದೆಹಲಿ |
| 9 | ದೆಹಲಿ | ವೊಕೇಶನಲ್ ಯೂನಿವರ್ಸಿಟಿ, ದೆಹಲಿ |
| 10 | ದೆಹಲಿ | ADR-ಸೆಂಟ್ರಿಕ್ ಜ್ಯುರಿಡಿಕಲ್ ಯೂನಿವರ್ಸಿಟಿ, ರಾಜೇಂದ್ರ ಪ್ಲೇಸ್ |
| 11 | ದೆಹಲಿ | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ನವದೆಹಲಿ |
| 12 | ದೆಹಲಿ | ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್-ಎಂಪ್ಲಾಯ್ಮೆಂಟ್, GTK ಡಿಪೋ |
| 13 | ದೆಹಲಿ | ಆಧ್ಯಾತ್ಮಿಕ ವಿಶ್ವವಿದ್ಯಾಲಯ, ರೋಹಿಣಿ |
| 14 | ಹರಿಯಾಣ | ಮ್ಯಾಜಿಕ್ ಮತ್ತು ಆರ್ಟ್ ಯೂನಿವರ್ಸಿಟಿ, ಫರಿದಾಬಾದ್ |
| 15 | ಜಾರ್ಖಂಡ್ | ದಕ್ಷ ಯೂನಿವರ್ಸಿಟಿ, ರಾಂಚಿ |
| 16 | ಕರ್ನಾಟಕ | ಸರ್ವ ಭಾರತೀಯ ಶಿಕ್ಷಾ ಪೀಠ, ತುಮಕೂರು |
| 17 | ಕರ್ನಾಟಕ | ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ, ಬೆಂಗಳೂರು |
| 18 | ಕೇರಳ | ಇಂಟರ್ನ್ಯಾಷನಲ್ ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ಪ್ರೊಫೆಟಿಕ್ ಮೆಡಿಸಿನ್, ಕೋಯಿಕ್ಕೋಡ್ |
| 19 | ಕೇರಳ | ಸೇಂಟ್ ಜಾನ್ಸ್ ಯೂನಿವರ್ಸಿಟಿ, ಕಿಶನಾಟ್ಟಂ |
| 20 | ಮಹಾರಾಷ್ಟ್ರ | ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ |
| 21 | ಮಹಾರಾಷ್ಟ್ರ | ನ್ಯಾಷನಲ್ ಬ್ಯಾಕ್ವರ್ಡ್ ಕೃಷಿ ವಿದ್ಯಾಪೀಠ, ಸೊಲ್ಲಾಪುರ |
| 22 | ನವದೆಹಲಿ | ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೊಲ್ಯೂಷನ್, ಜನಕಪುರಿ |
| 23 | ನವದೆಹಲಿ | ಮೌಂಟೇನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ, ನೆಹರು ಪ್ಲೇಸ್ |
| 24 | ಪುದುಚೇರಿ | ಉಷಾ ಲಕ್ಷ್ಮಣನ್ ಕಾಲೇಜ್ ಆಫ್ ಎಜುಕೇಶನ್, ತಿರುಕ್ಕನೂರ್ |
| 25 | ಪುದುಚೇರಿ | ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ |
| 26 | ರಾಜಸ್ಥಾನ | ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಅಲ್ವಾರ್ |
| 27 | ಉತ್ತರ ಪ್ರದೇಶ | ಗಾಂಧಿ ಹಿಂದಿ ವಿದ್ಯಾಪೀಠ, ಅಲಹಾಬಾದ್ |
| 28 | ಉತ್ತರ ಪ್ರದೇಶ | ನೇತಾಜಿ ಸುಭಾಷ್ ಚಂದ್ರ ಬೋಸ್ ಯೂನಿವರ್ಸಿಟಿ (ಓಪನ್ ಯೂನಿವರ್ಸಿಟಿ), ಅಲಿಘರ್ |
| 29 | ಉತ್ತರ ಪ್ರದೇಶ | ಭಾರತೀಯ ಶಿಕ್ಷಾ ಪರಿಷತ್, ಲಕ್ನೋ |
| 30 | ಉತ್ತರ ಪ್ರದೇಶ | ಮಹಾಮಾಯ ಟೆಕ್ನಿಕಲ್ ಯೂನಿವರ್ಸಿಟಿ, ನೋಯ್ಡಾ |
| 31 | ಪಶ್ಚಿಮ ಬಂಗಾಳ | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಕೋಲ್ಕತ್ತಾ |
| 32 | ಪಶ್ಚಿಮ ಬಂಗಾಳ | ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್, ಕೋಲ್ಕತ್ತಾ |

