HomeLatest NewsBIG NEWS : 'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : 2026 ರ 'CLT'...

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : 2026 ರ ‘CLT’ ಪರೀಕ್ಷೆಯ ಹೊಸ ಪಠ್ಯಕ್ರಮ ಪ್ರಕಟ.!

ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (CLT) ಉತ್ತೀರ್ಣರಾಗಲು ನೀಡಲಾಗಿದ್ದ ಗಡುವನ್ನು ಡಿಸೆಂಬರ್ 31, 2026ರವರೆಗೆ ವಿಸ್ತರಿಸಲು ಸರ್ಕಾರ ಕರಡು ನಿಯಮವನ್ನು ಪ್ರಕಟಿಸಿದೆ.

ಈ ಹಿಂದೆ 31.12.2025ರೊಳಗೆ ಪರೀಕ್ಷೆ ಪಾಸು ಮಾಡಬೇಕೆಂದು ಇದ್ದ ನಿಯಮವನ್ನು ಈಗ 31.12.2026ಕ್ಕೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಗ್ರೂಪ್ ಎ, ಬಿ ಮತ್ತು ಸಿ ನೌಕರರಿಗೆ ಈ ಪರೀಕ್ಷೆ ಕಡ್ಡಾಯವಾಗಿದೆ. ಆದರೆ, 50 ವರ್ಷ ಮೇಲ್ಪಟ್ಟ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

ನಿಗದಿತ ಅವಧಿಯಲ್ಲಿ ಪರೀಕ್ಷೆ ಪಾಸಾಗದಿದ್ದರೆ ವಾರ್ಷಿಕ ವೇತನ ಬಡ್ತಿ (Increment) ಮತ್ತು ಮುಂಬಡ್ತಿ (Promotion) ಪಡೆಯಲು ಅರ್ಹರಾಗುವುದಿಲ್ಲ.ಮೊದಲ ಪ್ರಯತ್ನಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ 2ನೇ ಅಥವಾ ನಂತರದ ಪ್ರಯತ್ನಗಳಿಗೆ 359 ರೂ. + ಬ್ಯಾಂಕಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2026 ರ CLT ಪರೀಕ್ಷೆಯ ಹೊಸ ಪಠ್ಯಕ್ರಮ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular