ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಏಪ್ರಿಲ್ 9ರಂದು ಉಪಚುನಾವಣೆ ನಡೆದಿತ್ತು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್ ಶಾಮನೂರು ಹಾಗೂ ಬಿಜೆಪಿಯಿಂದ ಶ್ರೀನಿವಾಸ್ ದಾಸಕರಿಯಪ್ಪ ಸ್ಪರ್ಧಿಸಿದ್ದರು.
ಇಂದು ( ಮೇ 4 ) ಪಂಚರಾಜ್ಯಗಳ ಚುನಾವಣಾ ಮತ ಎಣಿಕೆ ಬೆಳಗ್ಗೆ ಎಂಟು ಗಂಟೆಯಿಂದ ಆರಂಭವಾಗಿದ್ದು, ಇದರ ಜತೆಗೆ ದಾವಣಗೆರೆ ಉಪಚುನಾವಣೆಯ ಮತ ಎಣಿಕೆಯೂ ಸಹ ಆರಂಭಗೊಂಡಿದೆ.
ಇನ್ನು ಮತ ಎಣಿಕೆ ಆರಂಭಕ್ಕೂ ಮುನ್ನ ದಾವಣಗೆರೆ ಕ್ಷೇತ್ರದ ಮತ ಪೆಟ್ಟಿಗೆಗಳನ್ನು ಇರಿಸಲಾಗಿದ್ದ ಡಿಆರ್‌ಆರ್ ಕಾಲೇಜಿನ ಸ್ಟ್ರಾಂಗ್ ರೂಮ್ ತೆರೆಯಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಸ್ಟ್ರಾಂಗ್ ರೂಮ್ ಲಾಕ್ ಮಾಡಲು ಬಳಸಲಾಗಿದ್ದ ಕೀಲಿಗಳನ್ನು ಮರೆತುಬಂದ ಕಾರಣ ಬೀಗವನ್ನು ಒಡೆದು ತೆರೆಯಲಾಗಿದೆ.
ಎಲ್ಲ ಮೂರು ಸ್ಟ್ರಾಂಗ್ ರೂಮ್‌ಗಳ ಕೀಲಿಗಳೂ ಸಹ ನಾಪತ್ತೆಯಾಗಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಜಿಲ್ಲಾಧಿಕಾರಿಗಳು ಚುನಾವಣಾ ಕೇಂದ್ರದ ಮುಖ್ಯಸ್ಥರ ವಿರುದ್ಧ ಅಸಮಾಧಾನಗೊಂಡಿದ್ದಾರೆ.

