HomeLatest Newsಡಿಎಂಕೆ ಮೊದಲ ಎಚ್ಚರಿಕೆ: ವಿಜಯ್ ಸರ್ಕಾರ ರಚಿಸಲಿ, ಆತನಿಗೆ 6 ತಿಂಗಳು ನಾವೇನೂ ತೊಂದರೆ ಕೊಡುವುದಿಲ್ಲ;...

ಡಿಎಂಕೆ ಮೊದಲ ಎಚ್ಚರಿಕೆ: ವಿಜಯ್ ಸರ್ಕಾರ ರಚಿಸಲಿ, ಆತನಿಗೆ 6 ತಿಂಗಳು ನಾವೇನೂ ತೊಂದರೆ ಕೊಡುವುದಿಲ್ಲ; ವಿರೋಧ ಪಕ್ಷದಲ್ಲಿ ಕುಳಿತು ಶುರು ಸ್ಟಾಲಿನ್ ಆಟ

ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಎದ್ದಿದ್ದು, ವಿಜಯ್ ನೇತೃತ್ವದ ಟಿವಿಕೆ ಪಕ್ಷ ಸರ್ಕಾರ ರಚಿಸಲು ಮುಂದಾಗಿದೆ. ಬಲಿಷ್ಠ ಡಿಎಂಕೆಯನ್ನು ಚುನಾವಣೆಯಲ್ಲಿ ಸೋಲಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಈ ಮಟ್ಟಿಗಿನ ಗೆಲುವು ಸಾಧಿಸಿದ್ದು ಅಚ್ಚರಿ ಹಾಗೂ ವಿಶೇಷವಾಗಿದೆ.

ಟಿವಿಕೆ 108 ಸೀಟುಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು 118 ಸೀಟುಗಳ ಬಹುಮತ ಅಗತ್ಯವಿದೆ. ಹೀಗಾಗಿ ಟಿವಿಕೆಗೆ ಇನ್ನೂ 10 ಸೀಟುಗಳ ಅಗತ್ಯವಿದ್ದು, 5 ಸೀಟುಗಳನ್ನು ಹೊಂದಿದ್ದ ಡಿಎಂಕೆ ಮೈತ್ರಿ ಪಕ್ಷ ಕಾಂಗ್ರೆಸ್ ಟಿವಿಕೆ ಕೈ ಹಿಡಿದಿದೆ. ಸದ್ಯ ಟಿವಿಕೆ ಈ ಹೊಸ ಮೈತ್ರಿ ಜತೆಗೆ ಅಗತ್ಯವಿರುವ ಇನ್ನುಳಿದ ಸೀಟುಗಳನ್ನು ಕಲೆಹಾಕುವಲ್ಲಿ ನಿರತವಾಗಿದೆ.

ಇನ್ನು 59 ಸೀಟುಗಳನ್ನು ಮಾತ್ರ ಗೆದ್ದ ಡಿಎಂಕೆ ವಿರೋಧ ಪಕ್ಷವಾಗಿ ಈ ಬಾರಿ ವಿಧಾನಸಭೆ ಪ್ರವೇಶಿಸಲಿದ್ದು, ಟಿವಿಕೆ ಆಡಳಿತ ವೈಖರಿಯ ಟೀಕೆಗೆ ಸಜ್ಜಾಗಿದೆ. ಇನ್ನು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಸೋಲುಂಡಿದ್ದು, ವಿರೋಧ ಪಕ್ಷದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಯೂ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನಡುವೆಯೇ ಸ್ಟಾಲಿನ್ ವಿರೋಧ ಪಕ್ಷದ ಕೆಲಸವನ್ನು ಸರ್ಕಾರ ರಚನೆಯಾಗುವ ಮುನ್ನವೇ ಆರಂಭಿಸಿದ್ದಾರೆ. ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚಿಸಲಿ, ಆರು ತಿಂಗಳು ಅವರಿಗೆ ನಾವು ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ, ಅವರು ಕೊಟ್ಟ ಆಶ್ವಾಸನೆಗಳನ್ನು ಪೂರ್ಣಗೊಳಿಸಲು ಅವರ ಕೈನಲ್ಲಿ ಸಾಧ್ಯವಿಲ್ಲ, ಟಿವಿಕೆ ಸರ್ಕಾರ ವಿಫಲವಾಗಲಿದೆ, ಜನರ ಮುಂದೆ ಅವರ ಬಂಡವಾಳ ಬಯಲಾಗಲಿದೆ ಎಂದಿದ್ದಾರೆ.

ಮುಖ್ಯವಾಗಿ ಶಾಲಾ ಮಕ್ಕಳಿಗೆ ಬಿಸಿಯೂಟ ಹಾಗೂ ತಿಂಡಿ ನೀಡುವ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲದ ಹಾಗೆ ನೋಡಿಕೊಳ್ಳಲಿ, ಪ್ರತಿ ಕುಟುಂಬದ ಯಜಮಾನಿಗೆ 2500 ರೂ ಕೊಡುವುದಾಗಿ ಘೋಷಿಸಿದ್ದಾರೆ, ಅಷ್ಟು ಬೇಡ ನಮ್ಮ ಹಾಗೆ 1000 ರೂ ಕೊಡಲಿ ನೋಡೋಣ ಎಂದಿದ್ದಾರೆ. ವರ್ಷಕ್ಕೆ ಆರು ಎಲ್‌ಪಿಜಿ ನೀಡುವ ಯೋಜನೆ ಆಗದಿರುವ ಕೆಲಸ ಎಂದೂ ಸಹ ಸ್ಟಾಲಿನ್ ಟೀಕಿಸಿದ್ದಾರೆ.

ಈ ಸವಾಲಿನ ಮೂಲಕ ಸ್ಟಾಲಿನ್ ಟಿವಿಕೆಗೆ ಎಚ್ಚರಿಕೆಯನ್ನು ನೀಡಿದೆ. ಅದರಲ್ಲೂ ಆರು ತಿಂಗಳು ತೊಂದರೆ ಕೊಡುವುದಿಲ್ಲ, ಅಲ್ಲಿಯವರೆಗೆ ಅವರ ಆಡಳಿತ ನೋಡಿ ಮಾತನಾಡುತ್ತೇವೆ ಎಂದು ಹೇಳುವ ಮೂಲಕ ಟಿವಿಕೆ ಜನರ ಪರ ಕೆಲಸ ಮಾಡುವಲ್ಲಿ ವಿಫಲವಾದರೆ ಡಿಎಂಕೆ ವಿರೋಧ ಪಕ್ಷವಾಗಿ ಯಾವ ಮಟ್ಟಕ್ಕೆ ತರಾಟೆಗೆ ತೆಗೆದುಕೊಳ್ಳಬಹುದು ಹಾಗೂ ವಿಫಲತೆಯ ಬಂಡವಾಳವನ್ನು ಬಿಚ್ಚಿಡಬಹುದು ಎಂಬ ಮುನ್ನೆಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular