HomeLatest News'SSLC' ಪೂರ್ವಸಿದ್ಧತಾ ಪರೀಕ್ಷೆ-1 ರ ಅಂಕ ನಮೂದು : ರಾಜ್ಯದ ಎಲ್ಲಾ ಶಾಲೆಗಳಿಗೆ ಪರೀಕ್ಷಾ ಮಂಡಳಿ...

‘SSLC’ ಪೂರ್ವಸಿದ್ಧತಾ ಪರೀಕ್ಷೆ-1 ರ ಅಂಕ ನಮೂದು : ರಾಜ್ಯದ ಎಲ್ಲಾ ಶಾಲೆಗಳಿಗೆ ಪರೀಕ್ಷಾ ಮಂಡಳಿ ಮಹತ್ವದ ಆದೇಶ.!

ಬೆಂಗಳೂರು : ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ -1 ರಲ್ಲಿ ವಿದ್ಯಾರ್ಥಿಗಳು ಪ್ರತಿ ಭಾಷೆ/ವಿಷಯದಲ್ಲಿ ಪಡೆದ ಅಂಕಗಳನ್ನು ಆಯಾ ವಿಷಯ ಶಿಕ್ಷಕರು ಶಾಲಾ ಲಾಗಿನ್ ನಲ್ಲಿ ನಮೂದಿಸುವ ಬಗ್ಗೆ ಪರೀಕ್ಷಾ ಮಂಡಳಿ ಮಹತ್ವದ ಸುತ್ತೋಲೆ ಹೊರಡಿಸಿದೆ.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮುಖ್ಯಪರೀಕ್ಷೆಯ ಭಯ ಹಾಗೂ ಹಿಂಜರಿಕೆಯನ್ನು ಹೋಗಲಾಡಿಸಿ ಅವರಲ್ಲಿ ಆತ್ಮಸ್ಥೆರ್ಯ ಮೂಡಿಸಲು ಮಂಡಲಿಯಿಂದ ಮೂರು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿದೆ. ಅದರಂತೆ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಖಾಸಗಿ ಅನುದಾನರಹಿತ ಶಾಲೆಗಳಿಗೆ ಮಂಡಲಿಯಿಂದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಪ್ರತಿದಿನ ವೇಳಾಪಟ್ಟಿಯಂತೆ ಪ್ರಶ್ನೆಪತ್ರಿಕೆಗಳನ್ನು ಶಾಲಾ ಲಾಗಿನ್ ಮೂಲಕ ಲಭ್ಯಗೊಳಿಸಲಾಗುತ್ತಿದೆ.

ಮೊದಲ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ:05.01.2026 ರಿಂದ 10.01.2026 ರವರೆಗೆ ನಡೆಸಲಾಗುತ್ತಿದೆ. 8,10,924ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 15925 ಶಾಲೆಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಆಧರಿಸಿ ಅಗತ್ಯ ರೀತಿಯಲ್ಲಿ ಪ್ರೋತ್ಸಾಹ ಹಾಗೂ ಪರಿಹಾರ ಬೋಧನೆ ಮಾಡಿ ಎಲ್ಲಾ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣವಾಗುವಂತೆ ಮಾಡುವ ಸದುದ್ದೇಶದಿಂದ ಫಲಿತಾಂಶ ವಿಶ್ಲೇಷಣೆ ಮಾಡಬೇಕಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ಶಾಲೆಯಿಂದ 2026ರ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಅಂಕಗಳನ್ನು ದಾಖಲಿಸಲು ಶಾಲಾ ಲಾಗಿನ್ನಲ್ಲಿ ಅವಕಾಶ ನೀಡಲಾಗಿದೆ. ಎಲ್ಲಾ ಶಿಕ್ಷಕರು ತಮ್ಮ ಭಾಷೆ/ವಿಷಯಗಳ ಉತ್ತರ ಪತ್ರಿಕೆಗಳನ್ನು ತುರ್ತಾಗಿ ಮೌಲ್ಯಮಾಪನ ಮಾಡಿ ಅಂಕಗಳನ್ನು ದಿನಾಂಕ: 12.01.2026 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಕಗಳನ್ನು ದಾಖಲಿಸುವ ಮುನ್ನ ಗಮನಿಸಬೇಕಾದ ಅಂಶಗಳು

Preparatory exam-1 marks entry menu ಅನ್ನು ಶಾಲಾ ಲಾಗಿನ್ನಲ್ಲಿ ಕೊಡಲಾಗಿದೆ. ಶಿಕ್ಷಕರು ಭಾಷೆ/ವಿಷಯಗಳನ್ನು ಆಯ್ಕೆ ಮಾಡಿಕೊಂಡು SSLC ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಯಥಾವತ್ತಾಗಿ ನಮೂದಿಸುವುದು. (ಆಂತರಿಕ ಅಂಕಗಳನ್ನು ಹೊರತುಪಡಿಸಿ) ಒಂದು ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿಗೆ move ಆಗಲು TAB button ಬಳಸಬಹುದು. ವಿದ್ಯಾರ್ಥಿ ಹೆಸರಿನ ಮುಂದೆ ಅಂಕಗಳನ್ನು ನಮೂದಿಸಿದ ತಕ್ಷಣ Present enable ಆಗುತ್ತದೆ, ವಿದ್ಯಾರ್ಥಿ ಗೈರುಹಾಜರಾಗಿದ್ದಲ್ಲಿ ಗೈರುಹಾಜರಿ button click ಮಾಡಬೇಕು ಆಗ ‘ರ’ ಅಂಕಗಳು ನಮೂದಾಗುತ್ತವೆ.

ಎಲ್ಲಾ 6 ವಿಷಯಗಳಿಗೆ ನಿಮ್ಮ ಶಾಲೆಯ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ನಮೂದಿಸಿದ ನಂತರ report generate ಮಾಡಿಕೊಳ್ಳಬಹುದು. ಎಲ್ಲಾ ವಿದ್ಯಾರ್ಥಿಗಳ ಅಂಕಗಳನ್ನು ನಮೂದಿಸಿದ ನಂತರವಷ್ಟೇ Freeze ಮಾಡಲು ಸಾಧ್ಯವಾಗುತ್ತದೆ.consolidated report 2 excel/pdf export . Freeze ಮಾಡಿದಲ್ಲಿ ಮಾತ್ರವೇ ಮಂಡಲಿ ಡೇಟಾಬೇಸ್ ಗೆ ದತ್ತಾಂಶ ಸ್ವೀಕೃತವಾಗುತ್ತದೆ.
ಶಾಲಾ ಹಂತದಲ್ಲಿ EXCEL DOWNLOAD ಮಾಡಿಕೊಂಡು ಫಲಿತಾಂಶ ವಿಶ್ಲೇಷಿಸಿಕೊಳ್ಳಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular