HomeRecipiesಈರುಳ್ಳಿ ಸೊಪ್ಪಿನಲ್ಲಿದೆ ಆರೋಗ್ಯದ ಗಣಿ: ಮನೆಯಲ್ಲೇ ಸುಲಭವಾಗಿ ಮಾಡಿ ಗರಿಗರಿಯಾದ ಸ್ಪ್ರಿಂಗ್ ಆನಿಯನ್ ಕಟ್ಲೆಟ್

ಈರುಳ್ಳಿ ಸೊಪ್ಪಿನಲ್ಲಿದೆ ಆರೋಗ್ಯದ ಗಣಿ: ಮನೆಯಲ್ಲೇ ಸುಲಭವಾಗಿ ಮಾಡಿ ಗರಿಗರಿಯಾದ ಸ್ಪ್ರಿಂಗ್ ಆನಿಯನ್ ಕಟ್ಲೆಟ್

ಸಂಜೆ ವೇಳೆ ಬಿಸಿಬಿಸಿ ಚಹಾದೊಂದಿಗೆ ತಿನ್ನಲು ಗರಿಗರಿಯಾದ ಹಾಗೂ ರುಚಿಕರವಾದ ಸ್ನ್ಯಾಕ್ಸ್ ಇದ್ದರೆ ಆ ಮಜಾವೇ ಬೇರೆ. ಅದರಲ್ಲೂ ಆರೋಗ್ಯಕರ ತರಕಾರಿಗಳು ಮತ್ತು ಉಳ್ಳಾಗಡ್ಡಿ ಕೆನೆ ಅಥವ ಈರುಳ್ಳಿ ಸೊಪ್ಪನ್ನು ಬಳಸಿ ಮಾಡುವ ಕಟ್ಲೆಟ್ ಎಲ್ಲರ ಮೆಚ್ಚಿನ ತಿಂಡಿಯಾಗಿದೆ. ಹಸಿರು ತರಕಾರಿಗಳ ಪೋಷಕಾಂಶ ಹಾಗೂ ಮಸಾಲೆಗಳ ಸಮ್ಮಿಶ್ರಣ ಹೊಂದಿರುವ ಈ ಸ್ಪ್ರಿಂಗ್ ಆನಿಯನ್ ವೆಜಿಟೇಬಲ್ ಕಟ್ಲೆಟ್ ಅನ್ನು ಅತ್ಯಂತ ಸುಲಭವಾಗಿ ಮನೆಯಲ್ಲೇ ಸಿದ್ಧಪಡಿಸಬಹುದು.

ಬೇಕಾಗುವ ಪದಾರ್ಥಗಳು

ಅರ್ಧ ಕೆಜಿ ಸಣ್ಣಗೆ ಹೆಚ್ಚಿದ ಈರುಳ್ಳಿ ಸೊಪ್ಪು (ಸ್ಪ್ರಿಂಗ್ ಆನಿಯನ್), ತಲಾ ಇನ್ನೂರು ಗ್ರಾಂ ಹೆಚ್ಚಿದ ಆಲೂಗಡ್ಡೆ, ಕ್ಯಾರೆಟ್, ಫ್ರೆಂಚ್ ಬೀನ್ಸ್ ಮತ್ತು ಹಸಿ ಬಟಾಣಿ. ಐದು ಗ್ರಾಂ ಜೀರಿಗೆ, ತಲಾ ಹತ್ತು ಗ್ರಾಂ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅಚ್ಚಖಾರ ಪುಡಿ, ಗರಂ ಮಸಾಲಾ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು. ಬೈಂಡಿಂಗ್ ಗಾಗಿ ಮೈದಾ ಹಿಟ್ಟು, ಅಗತ್ಯಕ್ಕೆ ತಕ್ಕಷ್ಟು ಬ್ರೆಡ್ ಕ್ರಂಬ್ಸ್ (ಬ್ರೆಡ್ ಪುಡಿ), ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ

ಮೊದಲು ಪ್ರೆಶರ್ ಕುಕ್ಕರ್ ಗೆ ಈರುಳ್ಳಿ ಸೊಪ್ಪನ್ನು ಹೊರತುಪಡಿಸಿ ಉಳಿದ ಎಲ್ಲಾ ತರಕಾರಿಗಳನ್ನು (ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಬಟಾಣಿ) ಹಾಕಿ, ಅರ್ಧ ಕಪ್ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಎರಡು ವಿಷಲ್ ಕೂಗಿಸಿ. ಕುಕ್ಕರ್ ತಣ್ಣಗಾದ ಮೇಲೆ ತರಕಾರಿಗಳಲ್ಲಿರುವ ಹೆಚ್ಚುವರಿ ನೀರನ್ನು ಸಂಪೂರ್ಣವಾಗಿ ಸೋಸಿಕೊಳ್ಳಿ.

ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ, ಜೀರಿಗೆ ಹಾಕಿ ಬಳಿಕ ಎಲ್ಲಾ ಒಣ ಮಸಾಲೆ ಪುಡಿಗಳನ್ನು (ಕೊತ್ತಂಬರಿ, ಜೀರಿಗೆ, ಖಾರ ಹಾಗೂ ಗರಂ ಮಸಾಲಾ ಪುಡಿ) ಸೇರಿಸಿ ಲಘುವಾಗಿ ಕೈಯಾಡಿಸಿ. ನಂತರ ಬೇಯಿಸಿದ ತರಕಾರಿಗಳನ್ನು ಚೆನ್ನಾಗಿ ಮ್ಯಾಶ್ ಮಾಡಿ (ಪುಡಿ ಮಾಡಿ), ಅದಕ್ಕೆ ಹೆಚ್ಚಿದ ಈರುಳ್ಳಿ ಸೊಪ್ಪು, ಹುರಿದಿಟ್ಟುಕೊಂಡ ಮಸಾಲೆ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಆರರಿಂದ ಏಳು ಚಮಚ ಬ್ರೆಡ್ ಪುಡಿಯನ್ನು ಸೇರಿಸಿ ಗಟ್ಟಿಯಾದ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

ಸಿದ್ಧವಾದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಕಟ್ಲೆಟ್ ಆಕಾರಕ್ಕೆ ತಟ್ಟಿಟ್ಟುಕೊಳ್ಳಿ. ಮತ್ತೊಂದು ಬೌಲ್ ನಲ್ಲಿ ಮೈದಾ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ತೆಳುವಾದ ಮಿಶ್ರಣ ಸಿದ್ಧಪಡಿಸಿ. ತಟ್ಟಿದ ಕಟ್ಲೆಟ್ ಗಳನ್ನು ಒಂದೊಂದಾಗಿ ಮೈದಾ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ನಂತರ ಬ್ರೆಡ್ ಪುಡಿಯಲ್ಲಿ ಹೊರಳಿಸಿ. ಹೀಗೆ ಮಾಡುವುದರಿಂದ ಕಟ್ಲೆಟ್ ಹೆಚ್ಚು ಗರಿಗರಿಯಾಗಿ ಬರುತ್ತದೆ. ಕೊನೆಯದಾಗಿ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ರೆಡಿಯಾದ ಕಟ್ಲೆಟ್ ಗಳನ್ನು ಹೊಂಬಣ್ಣ ಬರುವವರೆಗೆ ಕರಿದರೆ ಬಿಸಿಬಿಸಿಯಾದ ವೆಜ್ ಕಟ್ಲೆಟ್ ಸವಿಯಲು ಸಿದ್ಧ. ಇದನ್ನು ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular