HomeIndiaಎಸ್‌ಸಿ-ಎಸ್ಟಿ ಮೀಸಲಾತಿ ರಕ್ಷಣೆಗಾಗಿ ಆಗ್ರಹ: ಕಪ್ಪು ಶಾಲು ಧರಿಸಿ ಮಾಜಿ ಸಂಸದ ಉಗ್ರಪ್ಪ ಪ್ರತಿಭಟನೆ

ಎಸ್‌ಸಿ-ಎಸ್ಟಿ ಮೀಸಲಾತಿ ರಕ್ಷಣೆಗಾಗಿ ಆಗ್ರಹ: ಕಪ್ಪು ಶಾಲು ಧರಿಸಿ ಮಾಜಿ ಸಂಸದ ಉಗ್ರಪ್ಪ ಪ್ರತಿಭಟನೆ

ಬೆಂಗಳೂರು-ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನಿಂದಾಗಿ ಈ ಸಮುದಾಯಗಳಿಗೆ ತೀವ್ರ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ರಕ್ಷಣೆಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರ ನೇತೃತ್ವದಲ್ಲಿ ಶಾಸಕರ ಭವನದ ಬಳಿ ಕಪ್ಪು ಶಾಲು ಧರಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಸಮೀಕ್ಷೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಈ ಹಿಂದೆ ರಾಜ್ಯದಲ್ಲಿ ಎಸ್‌ಸಿ ಹಾಗೂ ಎಸ್‌ಟಿ ವರ್ಗಕ್ಕೆ ರಾಜಕೀಯ ಮತ್ತು ಶೈಕ್ಷಣಿಕ/ಉದ್ಯೋಗಿಕ ಮೀಸಲಾತಿಯನ್ನು ಶೇ. 50 ರಿಂದ ಶೇ. 56 ಕ್ಕೆ ಏರಿಸಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕುರಿತು ಕಾನೂನು ತರಲಾಗಿತ್ತು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ನ್ಯಾಯಾಲಯವು ಈ ಆದೇಶವನ್ನು ರದ್ದುಗೊಳಿಸಿ (Set Aside) ತೀರ್ಪು ನೀಡಿದೆ. ಇದು ಈ ಸಮುದಾಯಗಳ ಭವಿಷ್ಯಕ್ಕೆ ಬರೆದ ‘ಮರಣ ಶಾಸನ’ದಂತಿದೆ ಎಂದು ಉಗ್ರಪ್ಪ ತೀವ್ರ ಕಳವಳ ವ್ಯಕ್ತಪಡಿಸಿದರು.

ಮೀಸಲಾತಿಯ ಪಾಯಿನ್ ಸರ್ಕಲ್

ಮೀಸಲಾತಿಯನ್ನು ಸಂವಿಧಾನದ ೯ನೇ ಶೆಡ್ಯೂಲ್ (9th Schedule) ಗೆ ಸೇರಿಸುವ ಮೂಲಕ ಅದಕ್ಕೆ ಕಾನೂನುತ್ಮಕ ರಕ್ಷಣೆ ನೀಡಬೇಕು,ರಾಜ್ಯ ಸರ್ಕಾರವು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತಕ್ಷಣವೇ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ (SLP) ಸಲ್ಲಿಸಬೇಕು. ಮಾಜಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮೀಸಲಾತಿ ಹೆಚ್ಚಳವನ್ನು ೯ನೇ ಶೆಡ್ಯೂಲ್‌ಗೆ ಸೇರಿಸುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.

ರಾಜಕೀಯ ವಾಗ್ದಾಳಿ ಮತ್ತು ನಿರಂತರ ಒತ್ತಡ

ಕೇಂದ್ರದಲ್ಲಿ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಡಾ. ಕೆ. ಸುಧಾಕರ್, ಜಗದೀಶ್ ಶೆಟ್ಟರ್ ಮುಂತಾದ ರಾಜ್ಯದ ನಾಯಕರಿದ್ದರೂ, ತಮ್ಮದೇ ಸರ್ಕಾರದ ಅವಧಿಯಲ್ಲಿ ತಂದ ಈ ಕಾಯಿದೆಯನ್ನು (ಬಿಜೆಪಿಯ ಮಗು) ರಕ್ಷಿಸುವ ಕೆಲಸವನ್ನು ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರವು ತಕ್ಷಣವೇ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ದು ಒತ್ತಡ ಹೇರಬೇಕು.”ಈಗಾಗಲೇ ಉದ್ಯೋಗಕ್ಕೆ ಸೇರಿರುವವರ ಭವಿಷ್ಯ ತೂಗುಯ್ಯಲೆಯಲ್ಲಿದೆ. ಈ ವರ್ಗದ ಜನರು ಅನುಭವಿಸುತ್ತಿರುವ ನೋವು ಮತ್ತು ಸಮಸ್ಯೆಗಳನ್ನು ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕು. ನಮ್ಮ ನೋವನ್ನು ಸರ್ಕಾರದ ಗಮನಕ್ಕೆ ತರಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ರಾಜಕಾರಣಿಗಳು ಯಾವುದೇ ಕಾರಣಕ್ಕೂ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸಲು ಹೋಗಬಾರದು,” ಎಂದು ಮಾಜಿ ಸಂಸದ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಕೂಡಲೇ ಮಧ್ಯಪ್ರವೇಶಿಸಿ, ಎಸ್‌ಸಿ-ಎಸ್ಟಿ ವರ್ಗದ ಹಕ್ಕು ಮತ್ತು ಮೀಸಲಾತಿಯನ್ನು ಉಳಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular