
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಹಿನ್ನೆಯಲ್ಲಿ ರಾಂಚಿಯ ಜನರಿಗೆ ಜೊಮ್ಯಾಟೋ ರಿಯಾಯಿತಿ ದರದಲ್ಲಿ ಆಹಾರ ವಿತರಣೆ ಮಾಡಿತು.
ಎಲ್ಲರ ಮೆಚ್ಚುಗೆ ಗಳಿಸುವ ಮೂಲಕ ಧೋನಿ ತವರೂರಾದ ರಾಂಚಿಯ ಜನರು ಹೆಮ್ಮೆಪಡುವಂತೆ ಮಾಡಿದ್ದಾರೆ. ಹೀಗಾಗಿ ಅವರು ನಿವೃತ್ತಿ ಘೋಷಿಸಿದ ದಿನದಂದು ಆರ್ಡರ್ ಮಾಡಿದವರಿಗೆಲ್ಲ ರಿಯಾಯಿತಿ ದರದಲ್ಲಿ ಊಟೋಪಹಾರ ತಲುಪಿಸುವುದಾಗಿ ಜೊಮ್ಯಾಟೋ ಟ್ವಿಟ್ಟರ್ ನಲ್ಲಿ ಪ್ರಕಟಿಸಿತ್ತು.
ಇದನ್ನು ಗಮನಿಸಿದ ವ್ಯಕ್ತಿಯೊಬ್ಬ, ಧೋನಿ ಕೇವಲ ರಾಂಚಿಯ ಹೆಮ್ಮೆ ಮಾತ್ರವಲ್ಲ. ಇಡೀ ದೇಶದ ಹೆಮ್ಮೆ. ದೇಶಕ್ಕೇ ಈ ಕೊಡುಗೆ ಕೊಡಬಾರದೇಕೆ ಎಂದು ಪ್ರಶ್ನಿಸಿದ್ದಾನೆ.
ಇದಕ್ಕೆ ಉತ್ತರಿಸಿರುವ ಜೊಮ್ಯಾಟೋ, ಧೋನಿ ಅವರು ಇಡೀ ದೇಶದ ಹೆಮ್ಮೆ ಎನ್ನುವುದು ಸತ್ಯ. ಆದರೆ, ಅವರ ತವರು ನೆಲದವರಿಗೆ ತುಸು ಹೆಚ್ಚಿನ ಹೆಮ್ಮೆ ಇರುತ್ತದೆ. ಹೀಗಾಗಿ ಇಲ್ಲಿ ಮಾತ್ರ ಈ ಕೊಡುಗೆ. ಜಗತ್ತಿನಲ್ಲೆಲ್ಲೂ ಉಚಿತ ಊಟ ಇಲ್ಲ ಎಂಬುದು ನೆನಪಿರಲಿ ಎಂದಿದೆ.
https://twitter.com/ZomatoIN/status/1294910298860576785?ref_src=twsrc%5Etfw%7Ctwcamp%5Etweetembed%7Ctwterm%5E1294910298860576785%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fzomato-had-the-best-response-to-a-twitter-user-who-wanted-dhoni-special-discount-for-whole-country-2794137.html
https://twitter.com/ZomatoIN/status/1294910298860576785?ref_src=twsrc%5Etfw%7Ctwcamp%5Etweetembed%7Ctwterm%5E1294911243543879681%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fzomato-had-the-best-response-to-a-twitter-user-who-wanted-dhoni-special-discount-for-whole-country-2794137.html