
ಕ್ರಿಕೆಟ್ ಇತ್ತೀಚೆಗೆ ಬರೀ ಬ್ಯಾಟ್ಸ್‌ಮನ್‌ಗಳ ಆಟವಾಗಿಬಿಟ್ಟಿದ್ದು, ಮ್ಯಾಚ್‌ಗಳೆಲ್ಲಾ ತೀರಾ ಏಕಾತನತೆಯಿಂದ ಬೋರ್ ಆಗಲು ಆರಂಭಿಸಿವೆ. ಆದರೂ ಸಹ ಕೆಲವೊಂದು ಬೌಲರ್‌ಗಳು ಹೊಸ ನಿಯಮಾವಳಿಗಳ ಸೀಮಿತ ಚೌಕಟ್ಟಿನೊಳಗೇ ಹೊಸದನ್ನು ಅನ್ವೇಷಣೆ ಮಾಡುವ ಮೂಲಕ ಸುದ್ದಿ ಮಾಡುತ್ತಿರುತ್ತಾರೆ.
ಬಹಳ ಅಸಹಜವಾದ ಬೌಲಿಂಗ್ ಶೈಲಿ ಇರುವ ಬೌಲರ್ ಒಬ್ಬರ ವಿಡಿಯೋವನ್ನು ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಶೇರ್ ಮಾಡಿದ್ದಾರೆ. ಬಲಗೈ ಸ್ಪಿನ್ನರ್ ಆದ ಈ ಅನಾಮಧೇಯ ಬೌಲರ್‌ನ ವಿಶಿಷ್ಟ ಶೈಲಿಯನ್ನು ತಮ್ಮ ಒಂದು ಕೋಟಿಗೂ ಅಧಿಕ ಫಾಲೋವರ್‌ಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ ಯುವಿ.
ಚೆಂಡನ್ನು ಡೆಲಿವರ್ ಮಾಡುವ ಮುನ್ನ ಬೌಲಿಂಗ್ ಸ್ಟ್ರೈಡ್‌ನಲ್ಲಿ ನಾಲ್ಕೈದು ಬಾರಿ ತಮ್ಮಿಡೀ ದೇಹವನ್ನು ಗಿರಕಿಹೊಡೆಸುವ ಈ ಬೌಲರ್‌ನ ಶೈಲಿಯು ಭರತನಾಟ್ಯ ಮಾಡಿದಂತೆ ಕಾಣುತ್ತದೆ.
https://www.instagram.com/p/CKExkkZDC9h/?utm_source=ig_web_copy_link