ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುುನ್ ತೆಂಡುಲ್ಕರ್ ಗೆ ತಾವು ಸಲಹೆ ನೀಡುತ್ತಿರುವ ಹಳೆಯ ಫೋಟೋವೊಂದನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಜೂನಿಯರ್ ತೆಂಡುಲ್ಕರ್ ಲರ್ನಿಂಗ್ ಪ್ರಂ ದ ಬೆಸ್ಟ್” ಎಂದು ಟ್ರಿಕ್ಕಿ ಕ್ಯಾಪ್ಶನ್ ನೀಡಿದ್ದಾರೆ.
ಅರ್ಜುನ್ ತೆಂಡುಲ್ಕರ್ ಹಾಗೂ ಯುವರಾಜ್ ಇಬ್ಬರೂ ತರಬೇತಿಯ ಡ್ರೆಸ್ ನಲ್ಲಿದ್ದಾರೆ. ಯುವರಾಜ್ ಬ್ಯಾಟ್ ಹಿಡಿದಿದ್ದರೆ ಅರ್ಜುನ್ ಗ್ಲೌಸ್ ಹಾಕಿಕೊಂಡು ಏನೋ ತೋರಿಸುತ್ತಿರುವ ಚಿತ್ರ ಅದಾಗಿದೆ.
ಅರ್ಜುನ್ ತೆಂಡುಲ್ಕರ್ ಗೆ ಈಗ 21 ವರ್ಷವಾಗಿದ್ದು, ಅವರು ಈ ಹಿಂದೆ ಭಾರತ ಅಂಡರ್ 19 ಟೀಂನಲ್ಲೂ ಆಟವಾಡಿದ್ದರು. ಯುವರಾಜ್ ಸಿಂಗ್ 2019 ರಿಂದ ಎಲ್ಲ ರೀತಿಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದಾರೆ. ವಿಶೇಷ ಎಂದರೆ, ಯುವರಾಜ್ ಹಾಗೂ ಅರ್ಜುನ್ ಅವರ ಅಪ್ಪ ಸಚಿನ್ ತೆಂಡುಲ್ಕರ್ ಇಬ್ಬರೂ 2000 ದಿಂದ 2013 ನೇ ಇಸ್ವಿಯವರೆಗೂ ಆಟವಾಡಿದ್ದಾರೆ.