
ನವದೆಹಲಿ: ನವದೆಹಲಿಯ ಛತ್ರಸಾಲಾ ಸ್ಟೇಡಿಯಂನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಕುಸ್ತಿಪಟು ಒಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ಹಿಂದೆ ಎರಡು ಒಲಂಪಿಕ್ ಪದಕಗಳ ವಿಜೇತ ಸುಶೀಲ್ ಕುಮಾರ್ ಪಾತ್ರವಿರುವ ಆರೋಪ ಕೇಳಿಬಂದಿದೆ. ಮಂಗಳವಾರ ರಾತ್ರಿ ಏಕಾಏಕಿ ನುಗ್ಗಿದ ಕೆಲವು ಕುಸ್ತಿಪಟುಗಳು ಸ್ಟೇಡಿಯಂನಲ್ಲಿ ಇದ್ದ ಕುಸ್ತಿಪಟುಗಳ ಮೇಲೆ ಹಲ್ಲೆ ಮಾಡಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ತಮ್ಮ ಮೇಲಿನ ಆರೋಪವನ್ನು ಸುಶೀಲ್ ಕುಮಾರ್ ಅಲ್ಲಗಳೆದಿದ್ದಾರೆ. ಸ್ಟೇಡಿಯಂಗೆ ನುಗ್ಗಿ ಹಲ್ಲೆ ಮಾಡಿದವರು ನಮ್ಮ ಕುಸ್ತಿಪಟುಗಳಲ್ಲ. ತಮ್ಮ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.