ರೋಮ್: ಆಕಸ್ಮಿಕವಾಗಿ ಸಿಡಿದ ಗುಂಡಿಗೆ 19 ವರ್ಷದ ಶೂಟಿಂಗ್ ಚಾಂಪಿಯನ್ ಸಾವನ್ನಪ್ಪಿದ್ದಾರೆ. ಇಟಲಿಯ ಕ್ರಿಶ್ಚಿಯನ್ ಘಿಲ್ಲಿ ಮೃತಪಟ್ಟವರು. ವಿಶ್ವ ಕಿರಿಯರ ಶೂಟಿಂಗ್ ಚಾಂಪಿಯನ್ ಘಿಲ್ಲಿ ಇಟಲಿಯ ಪೀಸಾ ನಗರದ ಸಮೀಪದಲ್ಲಿದ್ದ ಕಾಡಿಗೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದು, ಬೇಟೆಗೆಂದು ಹೋಗಿದ್ದ ವೇಳೆ ಕೈಯಲ್ಲಿ ರೈಫಲ್ ಹಿಡಿದು ಕೆಳಗೆ ಬಿದ್ದಿದ್ದ ಕಾರ್ಟಿಡ್ಜ್ ಗಳನ್ನು ತೆಗೆದುಕೊಳ್ಳಲು ಮುಂದಾದಾಗ ಆಕಸ್ಮಿಕವಾಗಿ ಟ್ರಿಗರ್ ಒತ್ತಿದೆ. ಇದರಿಂದಾಗಿ ಘಿಲ್ಲಿ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ರಕ್ತಸ್ರಾವವಾಗಿದೆ. ಕೂಡಲೇ ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಈ ವೇಳೆಗಾಗಲೇ ಮೃತಪಟ್ಟಿದ್ದಾರೆನ್ನಲಾಗಿದೆ.
ಘಿಲ್ಲಿ ಕಳೆದ ವರ್ಷ ಪೆರುವಿನಲ್ಲಿ ನಡೆದ ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನ ಮತ್ತು ಒಂದು ಕಂಚಿನ ಪದಕ ಜಯಿಸಿದ್ದರು.