ಅಹಮದಾಬಾದ್: ಅಹಮದಾಬಾದ್ ನ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ. 6 ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಗಳಿಸಿದೆ.
ಭಾರತದ ಪರ ರೋಹಿತ್ ಶರ್ಮಾ 47, ಶುಭಮನ್ ಗಿಲ್ 4, ವಿರಾಟ್ ಕೊಹ್ಲಿ 54, ಶ್ರೇಯಸ್ ಅಯ್ಯರ್ 4, ಕೆ.ಎಲ್. ರಾಹುಲ್ 66, ರವೀಂದ್ರ ಜಡೇಜ 9, ಸೂರ್ಯ ಕುಮಾರ ಯಾದವ್ 18, ಮೊಹಮ್ಮದ್ ಶಮಿ 6, ಜಸ್ ಪ್ರೀತ್ ಬೂಮ್ರಾ 1, ಕುಲದೀಪ್ ಯಾದವ್ 10, ಮೊಹ್ಮದ್ ಸಿರಾಜ್ 9 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2 ವಿಕೆಟ್, ಜೋಶ್ ಹೇಜಲ್ ವುಡ್ 2, ಗ್ಲೆನ್ ಮ್ಯಾಕ್ಸ್ ವೆಲ್, ಆಡಂ ಜಂಪ ತಲಾ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 7, ಟ್ರಾವಿಸ್ ಹೆಡ್ ಅಜೇಯ 137, ಮೀಚಲ್ ಮಾರ್ಷ್ 15, ಸ್ಟೀವನ್ ಸ್ಮಿತ್ 4, ಮಾರ್ಕರ್ಸ್ ಲೆಬುಶಂಗೆ ಅಜೇಯ 58, ಗ್ಲೆನ್ ಮ್ಯಾಕ್ಸ್ ವೆಲ್ ಅಜೇಯ 2 ರನ್ ಗಳಿಸಿದ್ದಾರೆ. 43 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ.
ಭಾರತದ ಪರ ಬೂಮ್ರಾ 2, ಮೊಹ್ಮದ್ ಶಮಿ 1, ಮೊಹ್ಮದ್ ಸಿರಾಜ್ 1 ವಿಕೆಟ್ ಪಡೆದರು.
13ನೇ ಏಕದಿನ ವಿಶ್ವಕಪ್ ಇದಾಗಿದ್ದು, 1975ರಲ್ಲಿ ಆರಂಭವಾದ ವಿಶ್ವಕಪ್ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 13ನೇ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. 1987, 1999, 2003, 2007, 2015, 2023ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ. 13 ಆವೃತ್ತಿಗಳಲ್ಲಿ 8ನೇ ಬಾರಿಗೆ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿ ಇದುವರೆಗೂ ಅತಿ ಹೆಚ್ಚು ಬಾರಿ ಫೈನಲ್ ಪ್ರವೇಶ ಪಡೆದ ಮತ್ತು ಚಾಂಪಿಯನ್ ಆದ ತಂಡವಾಗಿದೆ.
ಸಂಕ್ಷಿಪ್ತ ಸ್ಕೋರ್
ಭಾರತ 50 ಓವರ್ ಗಳಲ್ಲಿ 240/10
ಆಸ್ಟ್ರೇಲಿಯಾ 43 ಓವರ್ ಗಳಲ್ಲಿ 241/4