ಅಹಮದಾಬಾದ್ ನ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಗಳಿಸಿದೆ.
ಭಾರತದ ಪರ ರೋಹಿತ್ ಶರ್ಮಾ 47, ಶುಭಮನ್ ಗಿಲ್ 4, ವಿರಾಟ್ ಕೊಹ್ಲಿ 54, ಶ್ರೇಯಸ್ ಅಯ್ಯರ್ 4, ಕೆ.ಎಲ್. ರಾಹುಲ್ 66, ರವೀಂದ್ರ ಜಡೇಜ 9, ಸೂರ್ಯ ಕುಮಾರ ಯಾದವ್ 18, ಮೊಹಮ್ಮದ್ ಶಮಿ 6, ಜಸ್ ಪ್ರೀತ್ ಬೂಮ್ರಾ 1, ಕುಲದೀಪ್ ಯಾದವ್ 10, ಮೊಹ್ಮದ್ ಸಿರಾಜ್ 9 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2 ವಿಕೆಟ್, ಜೋಶ್ ಹೇಜಲ್ ವುಡ್ 2, ಗ್ಲೆನ್ ಮ್ಯಾಕ್ಸ್ ವೆಲ್, ಆಡಂ ಜಂಪ ತಲಾ 1 ವಿಕೆಟ್ ಪಡೆದರು.