alex Certify ಮಹಿಳಾ ವಿಶ್ವಕಪ್ 2022: ಫೈನಲ್ ನಲ್ಲಿ ಇಂಗ್ಲೆಂಡ್ ಮಣಿಸಿ ದಾಖಲೆಯ 7 ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ವಿಶ್ವಕಪ್ 2022: ಫೈನಲ್ ನಲ್ಲಿ ಇಂಗ್ಲೆಂಡ್ ಮಣಿಸಿ ದಾಖಲೆಯ 7 ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್

ಕ್ರೈಸ್ಟ್‌ ಚರ್ಚ್‌: ಮಹಿಳಾ ವಿಶ್ವಕಪ್ 2022 ಫೈನಲ್‌ ನಲ್ಲಿ ಇಂಗ್ಲೆಂಡ್ ಸೋಲಿಸಿದ ಆಸ್ಟ್ರೇಲಿಯಾ ದಾಖಲೆಯ 7 ನೇ ಬಾರಿಗೆ ಚಾಂಪಿಯನ್‌ ಕಿರೀಟವನ್ನು ಗೆದ್ದುಕೊಂಡಿದೆ.

ಭಾನುವಾರ ಕ್ರೈಸ್ಟ್‌ ಚರ್ಚ್‌ ನ ಹ್ಯಾಗ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು 71 ರನ್‌ಗಳಿಂದ ಸೋಲಿಸಿದ ನಂತರ, ಆಸ್ಟ್ರೇಲಿಯಾವು 2022 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್‌ ಕಿರೀಟ ಧರಿಸಿದೆ.

ಅಲಿಸ್ಸಾ ಹೀಲಿ ಅವರ ಅದ್ಭುತ(170 ರನ್) ನೆರವನಿಂದ ಆಸ್ಟ್ರೇಲಿತಾ 356/5 ಬೃಹತ್ ಮೊತ್ತ ಕಲೆಹಾಕಿತು. ಇಂಗ್ಲೆಂಡ್ 285 ಕ್ಕೆ ಆಲೌಟ್ ಮಾಡಿದ ಆಸೀಸ್ ವನಿತೆಯರು ದಾಖಲೆಯ 7 ನೇ ಬಾರಿಗೆ ವಿಶ್ವ ಕಪ್ ಗೆದ್ದರು.

138 ಎಸೆತಗಳಲ್ಲಿ ಹೀಲಿ 170 ರನ್ ಗಳಿಸಿದ್ದು, ಅವರ ಗರಿಷ್ಠ ODI ಸ್ಕೋರ್ ಮಾತ್ರವಲ್ಲ. ಇದು ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಪುರುಷ ಅಥವಾ ಮಹಿಳೆ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ 356/5(ಅಲಿಸ್ಸಾ ಹೀಲಿ 170, ರಾಚೆಲ್ ಹೇನ್ಸ್ 68; ಅನ್ಯಾ ಶ್ರಬ್ಸೋಲ್ 3/46)

ಇಂಗ್ಲೆಂಡ್ 285/10 (ನ್ಯಾಟ್ ಸಿವರ್ ಅಜೇಯ 148, ಟಮ್ಮಿ ಬ್ಯೂಮಾಂಟ್ 27; ಜೆಸ್ ಜೊನಾಸೆನ್ 3-57)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...