
ಅರೆ..! ಬೆರಣಿಗೂ ಬಾಸ್ಕೆಟ್ ಬಾಲ್ಗೂ ಏನ್ ಸಂಬಂಧ ಎಂದು ಯೋಚನೆ ಮಾಡ್ತಿದ್ದೀರಾ..? ಹಾಗಾದ್ರೆ ಈ ವೈರಲ್ ವಿಡಿಯೋನ್ನೊಮ್ಮೆ ನೋಡಿ .
ವಿಡಿಯೋದಲ್ಲಿ ಮಹಿಳೆ ಗೋಡೆಗೆ ಬೆರಣಿಯನ್ನ ಅಂಟಿಸುತ್ತಿದ್ದಾರೆ. ಈಕೆ ಸಾಲಾಗಿ ಬೆರಣಿಯನ್ನ ಅಂಟಿಸೋದನ್ನ ನೋಡಿದ ನೆಟ್ಟಿಗರು ಈಕೆ ಬಾಸ್ಕೆಟ್ ಬಾಲ್ ಆಡೋಕೆ ಸರಿ ಇದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಬಾಸ್ಕೆಟ್ ಬಾಲ್ ತಂಡ ಈ ಮಹಿಳೆಯನ್ನ ಹುಡುಕುತ್ತಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.