ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ ಫೈನಲ್ ಪ್ರವೇಶಿಸಿದೆ. ಭಾರತ 70 ರನ್ ಅಂತರದಿಂದ ನ್ಯೂಜಿಲೆಂಡ್ ಮಣಿಸಿದೆ. ಈ ಮೂಲಕ ವಿಶ್ವಕಪ್ ನಲ್ಲಿ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬೃಹತ್ ಮೊತ್ತ ದಾಖಲಿಸಿತು. 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿದೆ. ನ್ಯೂಜಿಲೆಂಡ್ ಗೆಲುವಿಗೆ 398 ರನ್ ಗೆಲುವಿನ ಗುರಿ ನೀಡಿತು.
ಭಾರತದ ಪರ ರೋಹಿತ್ ಶರ್ಮಾ 47, ಶುಭಮನ್ ಗಿಲ್ ಅಜೇಯ 80, ವಿರಾಟ್ ಕೊಹ್ಲಿ 117, ಶ್ರೇಯಸ್ ಅಯ್ಯರ್ 105, ಕೆ.ಎಲ್. ರಾಹುಲ್ ಅಜೇಯ 39 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಪರ ಟೀಮ್ ಸೋಥಿ 3 ವಿಕೆಟ್ ಪಡೆದಿದ್ದಾರೆ.
ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ ನಲ್ಲಿ ಐದನೇ ಶತಕ ದಾಖಲಿಸಿದ್ದಾರೆ. 67 ಎಸೆತಗಳಲ್ಲಿ ಅವರು ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 50ನೇ ಶತಕ ಸಿಡಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು 50 ಶತಕ ಗಳಿಸಿದ ಮೊದಲ ಬ್ಯಾಟರ್ ಆಗಿದ್ದಾರೆ. ಸಚಿನ್ ತೆಂಡೂಲ್ಕರ್ 49 ಶತಕ ಗಳಿಸಿದ್ದಾರೆ.
ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಪರ ಡೆವೊನ್ ಕಾನ್ವೆ 13, ರಚಿನ್ ರವೀಂದ್ರ 13, ಕೇನ್ ವಿಲಿಯಮ್ಸನ್ 69, ಡೇರ್ಲ್ ಮಿಚೆಲ್ 134, ಟಾಮ್ ಲಾಥಮ್ 0, ಗ್ಲೆನ್ ಪಿಲಿಪ್ಸ್ 41, ಮಾರ್ಕ್ ಚಾಪ್ ಮನ್ 2, ಮಿಚೆಲ್ ಸ್ಯಾಟ್ನರ್ 9, ಟಿಮ್ ಸೋಥಿ 9, ಟ್ರೆಂಟ್ ಬೋಲ್ಟ್ ಅಜೇಯ 2, ಲುಕಿ ಫೆರ್ಗುಸನ್ 6 ರನ್ ಗಳಿಸಿದರು. ನ್ಯೂಜಿಲೆಂಡ್ 48.5 ಓವರ್ ಗಳಲ್ಲಿ 327 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಭಾರತದ ಪರ ಮೊಹ್ಮದ್ ಶಮಿ 7 ವಿಕೆಟ್ ಪಡೆದರು. ಕುಲದೀಪ್ ಯಾದವ್, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು