ಮೂರನೇ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ಕೊರೊನಾದಿಂದ ರದ್ದಾಗಿದೆ. ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ರದ್ದುಗೊಂಡಿದೆ. ಟೆನಿಸ್ ಚಾಂಪಿಯನ್ಶಿಪ್ ರದ್ದಾದ ಕಾರಣ ಆಟದಲ್ಲಿ ಪಾಲ್ಗೊಳ್ಳಬೇಕಿದ್ದ 620 ಆಟಗಾರರಿಗೆ ಬಹುಮಾನದ ಮೊತ್ತವನ್ನು ವಿತರಿಸಲಾಗಿದೆ.
ವಿಂಬಲ್ಡನ್ ಸಂಘಟಕ ಆಲ್ ಇಂಗ್ಲೆಂಡ್ ಕ್ಲಬ್ ಶುಕ್ರವಾರ ಈ ಮಾಹಿತಿಯನ್ನು ನೀಡಿತು. ಜೂನ್ 29 ರಿಂದ ಜುಲೈ 12 ರವರೆಗೆ ವಿಂಬಲ್ಡನ್ ನಡೆಯಬೇಕಿತ್ತು.ಕೊರೊನಾ ಇದಕ್ಕೆ ತಣ್ಣೀರೆರಚಿದೆ.126 ಮಿಲಿಯನ್ ಡಾಲರ್ ಬಹುಮಾನದ ಹಣವನ್ನು ನೀಡಬೇಕಾಗಿತ್ತು. ಈ ಹಣವನ್ನು ಎಲ್ಲ ಆಟಗಾರರಿಗೆ ಹಂಚಲಾಗಿದೆ.
ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದ 224 ಆಟಗಾರರಿಗೆ ತಲಾ 12,500 ಪೌಂಡ್ ನೀಡಲಾಗುತ್ತದೆ. ಡಬಲ್ಸ್ ಪಂದ್ಯದಲ್ಲಿ ಪಾಲ್ಗೊಳ್ಳಬೇಕಿದ್ದ ಆಟಗಾರರಿಗೆ 6,250 ಪೌಂಡ್ ಸಿಗಲಿದೆ.